ನವದೆಹಲಿ: ಚಲಿಸುವ ಕಾರಿನಿಂದ ಹಿಡಿದು ಡ್ಯಾನ್ಸ್ ಮಾಡುವ ಕಿಕಿ ಚಾಲೆಂಜ್ ಸಮೂಹ ಸನ್ನಿಯಾಗಿ ಬದಲಾಗುತ್ತಿದೆ. ಪೊಲೀಸರ ವಾರ್ನಿಂಗ್ ನಡುವೆಯೂ ಈ ಅಪಾಯಕಾರಿ ಡ್ಯಾನ್ಸ್ ಮಾಡಿ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಬಗ್ಗೆ ಖಡಕ್ ವಾರ್ನಿಂಗ್ ನೀಡಿರುವ ಬೆಂಗಳೂರು ಪೊಲೀಸರು, ‘ರಸ್ತೆಯಲ್ಲಿ ಕಿಕಿ ಡ್ಯಾನ್ಸ್ ಮಾಡಿದರೆ, ಖಂಡಿತವಾಗಿಯೂ ನಾವು ನಿಮ್ಮನ್ನು ಕಂಬಿಗಳ ಹಿಂದೆ ಡ್ಯಾನ್ಸ್ ಮಾಡುವಂತೆ ಮಾಡುತ್ತೇವೆ. ಕಿಕಿ ಚಾಲೆಂಜ್ ನಿಮಗೆ ಕಾನೂನಿನ ಒದೆ ನೀಡುತ್ತದೆಯೇ ಹೊರತು ಡ್ಯಾನ್ಸ್ನ ಕಿಕ್ ಅಲ್ಲ’ ಎಂದು ಟ್ವಿಟ್ ಮಾಡಿದ್ದಾರೆ.
ಕಿಕಿ ಡ್ಯಾನ್ಸ್ ಕೇವಲ ಡ್ಯಾನ್ಸ್ ಮಾಡುವವರಿಗೆ ಮಾತ್ರ ಅಪಾಯ ತಂದೊಡ್ಡುವುದಿಲ್ಲ, ಬದಲಿಗೆ ರಸ್ತೆಯಲ್ಲಿ ಇರುವವರನ್ನೂ ಅಪಾಯಕ್ಕೆ ದೂಡುತ್ತದೆ ಎಂದು ಎಚ್ಚರಿಸಿದ್ದಾರೆ.
ಇತ್ತೀಚಿಗೆ ಕೆಲವು ನಟಿಯರೂ ಕಿಕಿ ಚಾಲೆಂಜ್ ತೆಗೆದುಕೊಂಡು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದರು.
BCP’s Kiki:
If you dance for #KikiChallenge on the roads,
We’re sure of making you dance behind the bars!!“Kiki Challenge may get you a KICK OF LAW not KICK OF DANCE“
ಕಿ..ಕಿ.. ಡ್ಯಾನ್ಸ್ ರೋಡಲ್ಲಿ,
ಖಾಕಿ ಸಾಂಗ್ಸ್ ಜೈಲಲ್ಲಿ..!!#InMyFeelings or #InOurJail #KikiChallenge pic.twitter.com/xVXN46YCsk— BengaluruCityPolice (@BlrCityPolice) August 1, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.