ನವದೆಹಲಿ: ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಖ್ಯಾತ ಗಣಿತ ಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್ ಅವರು ಪ್ರತಿಷ್ಟಿತ ಫೀಲ್ಡ್ಸ್ ಮೆಡಲ್ಗೆ ಪಾತ್ರರಾಗಿದ್ದಾರೆ. ಫೀಲ್ಡ್ಸ್ನ್ನು ಗಣಿತದ ನೋಬೆಲ್ ಎಂದೇ ಕರೆಯಲಾಗುತ್ತದೆ.
40 ವರ್ಷದೊಳಗಿನ ಅತ್ಯಂತ ಭರವಸೆಯ ಗಣಿತ ಶಾಸ್ತ್ರಜ್ಞರಿಗೆ ಪ್ರತಿ 4 ವರ್ಷಗಳಿಗೊಮ್ಮೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಈ ಬಾರಿ ಒಟ್ಟು 4 ಮಂದಿಗೆ ಈ ಪ್ರಶಸ್ತಿ ದೊರೆತಿದ್ದು, ದೆಹಲಿಯಲ್ಲಿ ಜನಿಸಿದ 36 ವರ್ಷದ ವೆಂಕಟೇಶ್ ಕೂಡ ಒಬ್ಬರಾಗಿದ್ದಾರೆ. ಪ್ರಸ್ತುತ ಇವರು ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿದ್ದಾರೆ.
ವಿಜೇತರಿಗೆ 15 ಸಾವಿರ ಕೆನಡಿಯನ್-ಡಾಲರ್ ನಗದು ಪುರಸ್ಕಾರ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.