ಶ್ರೀನಗರ: ಭಾರತೀಯ ಸೇನೆಯ ಒಂದು ಘಟಕವಾದ ‘ರಾಷ್ಟ್ರೀಯ ರೈಫಲ್ಸ್’ ಜಮ್ಮು ಕಾಶ್ಮೀರದ ಭದರ್ವಹ ಜಿಲ್ಲೆಯ ದೊಡ ನಗರದಲ್ಲಿ ಮಾಜಿ ಸೈನಿಕರ ಮೆಗಾ ಸಮಾವೇಶವನ್ನು ಆಯೋಜನೆಗೊಳಿಸಿದ್ದು, 100ಕ್ಕೂ ಅಧಿಕ ಮಾಜಿ ಯೋಧರು ಇದರಲ್ಲಿ ಭಾಗಿಯಾಗಿದ್ದರು.
ಈ ಸಮಾವೇಶವನ್ನು 4 ರಾಷ್ಟ್ರೀಯ ರೈಫಲ್ಸ್ ಆಯೋಜನೆಗೊಳಿಸಿದ್ದು, ಯುದ್ಧ ಹೀರೋಗಳು, ಹುತಾತ್ಮರ ವಿಧವೆಯರು, ಇತರ ಕುಟುಂಬ ಸದಸ್ಯರುಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು.
ಯೋಧರ, ಅವರ ಕುಟುಂಬದವರ ಕುಂದು ಕೊರೆತಗಳನ್ನು ಆಲಿಸಲು ಈ ಸಮಾವೇಶವನ್ನು ಆಯೋಜನೆಗೊಳಿಸಲಾಗಿತ್ತು. ಪಿಂಚಣಿ, ಆರೋಗ್ಯ, ಮರು ಉದ್ಯೋಗ ಇತ್ಯಾದಿ ಸಮಸ್ಯೆಗಳ ಬಗ್ಗೆ ಇಲ್ಲಿ ದೂರು ನೀಡಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.