ನವದೆಹಲಿ: ಫೇಸ್ಬುಕ್, ಟ್ವಿಟರ್ಗಳಲ್ಲಿ ಅಪಾರ ಸಂಖ್ಯೆಯ ಫಾಲೋವರ್ಗಳನ್ನು ಹೊಂದುವ ಮೂಲಕ ದಾಖಲೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ 1 ಮಿಲಿಯನ್ಗೂ ಅಧಿಕ ವೀಕ್ಷಕರನ್ನು ಪಡೆದುಕೊಂಡಿದೆ.
ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಟ್ವಿಟರ್ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಯೂಟ್ಯೂಬ್ನಲ್ಲಿ ಹೆಚ್ಚು ಸಕ್ರಿಯರಾಗಿರುವ ಪ್ರಧಾನಿಗಳು, ತಮ್ಮ ಸಮಾವೇಶ, ಮನ್ ಕೀ ಬಾತ್ ಮುಂತಾದ ಕಾರ್ಯಕ್ರಮಗಳ ವೀಡಿಯೋಗಳನ್ನು ಅಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.
ಫೇಸ್ಬುಕ್, ಟ್ವಿಟರ್ನಲ್ಲೂ ಮೋದಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಅವರಿಗೆ ಅಲ್ಲಿ ತಲಾ 43 ಮಿಲಿಯನ್ ಫಾಲೋವರ್ಗಳಿದ್ದಾರೆ.
Another testimony of the common people’s love & affection for Hon’ble PM @narendramodi. Number of subscribers on his @YouTube channel has crossed the 1 million bar. pic.twitter.com/J2x8Go41cp
— Jagat Prakash Nadda (@JPNadda) July 30, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.