ಬೆಳಕಿನ ವೇಗ ಪ್ರತಿ ಸೆಕಂಡಿಗೆ 186 ಸಾವಿರ ಮೈಲುಗಳಂತೆ. ರೋಮರ್ ಎಂಬಾತ 1675 ರಲ್ಲಿ ಇದನ್ನು ಕಂಡು ಹಿಡಿದ.
ಆದರೆ ನಮ್ಮ (ವಿಜಯನಗರ ಸಾಮ್ರಾಜ್ಯದ) ಬುಕ್ಕರಾಯನ ಆಸ್ಥಾನದಲ್ಲಿ ಇದ್ದಂತ ಸಾಯನ ( c. 1315-1387) , ತನ್ನ ಋಗ್ವೇದ ಭಾಷ್ಯದಲ್ಲಿ ಬೆಳಕಿನ ವೇಗದ ಬಗ್ಗೆ ಬರೆದಿದ್ದಾನೆ ಅಂತ ಓದಿದೆ.
तरणिर्विश्वदर्शतो ज्योतिष्कृदसि सूर्य । विश्वमा भासिरोचनम् ॥
ತರಣಿರ್ವಿಶ್ವದರ್ಶತೋ ಜ್ಯೋತಿಕೃದಸಿ ಸೂರ್ಯ ! ವಿಶ್ವಮಾ ಭಾಸಿರೋಚನಂ!!
ಈ ಋಗ್ವೇದ ವಚನಕ್ಕೆ ಸಾಯನ ಭಾಷ್ಯ ಬರೆಯುತ್ತಾ “ಸ್ಮರ್ಯತೆ ಯೋಜನಾನಂ, ಸಹಸ್ರೆ ದ್ವೇ ದ್ವೇ ಶತೆ ದ್ವೇ ಚ ಯೋಜನೀಕೇನ ನಿಮಿಷೆ ಅರ್ಧೇನ ಕ್ರಮಮಾನ್! ” ಅಂತ ಹೇಳ್ತಾನೆ.
ಇದರ ಅನುವಾದ ಸೂರ್ಯನು 2202 ಯೋಜನಗಳನ್ನು ನಿಮಿಷಾರ್ಧದಲ್ಲಿ ಕ್ರಮಿಸುತ್ತಾನೆ ಅಂತ ನೆನೆಸಿಕೊಳ್ಳುತ್ತೇನೆ.
……………….
ಕೌಟಿಲ್ಯನ ಅರ್ಥ ಶಾಸ್ತ್ರ ಒಂದು ನಿಮಿಷವನ್ನು “ದಿನದ 360,೦೦೦ ನೆ ಒಂದು ಭಾಗ” ಅಂತ ಹೇಳಿದೆ ಅಂತೆ. ಅಂದ್ರೆ ಹೆಚ್ಚು ಕಡಿಮೆ 0.24 ಸೆಕೆಂಡ್ಗಳು.
ಇದರ ಪ್ರಕಾರ ಅರ್ಧ ನಿಮಿಷ ಅಂದ್ರೆ 0.12 ಸೆಕೆಂಡ್ಗಳು.
ಇನ್ನೊಂದು ಲೆಕ್ಕದ ಪ್ರಕಾರ – ಒಂದು ನಿಮಿಷ ಅಂದ್ರೆ 16/75 ಸೆಕೆಂಡ್ ಅಂತೆ
………………………………….
ಈಗಲೂ ನಾವು ಹೇಗೆ ಗೇಣು, ಅಡಿ ಅಂತ ಮನುಷ್ಯನ ದೇಹದ ಅಳತೆ ಆಧಾರದಲಿ ಲೆಕ್ಕ ಹಾಕ್ತೀವೋ ಹಾಗೆ ಮನುಷ್ಯನ ಎತ್ತರ ವೂ ಅಳತೆಯಾ ಒಂದು basic unit ಆಗಿದೆ ಅಂತಾರೆ.
ಓದು ದಂಡ ಅಂದ್ರೆ ಒಂದು ಪೌರುಷ (ಮನುಷ್ಯನ ಎತ್ತರ ಅಂತೆ)..ಇದು ಒಂದು ಬಿಲ್ಲಿಗೆ ( ಧನು) ಅತ್ವ ಬಿಲ್ಲಿನ ಎಳೆಗೆ (ಧನ್ವಂತರ) ಸಮ.
ಅರ್ಥ ಶಾಸ್ತ್ರದ ಪ್ರಕಾರ ಒಂದು ಯೋಜನ ಅಂದ್ರೆ ೮೦೦೦ ಧನುಗಳಂತೆ!
ಒಂದು ಪೌರುಷವನ್ನು 6 ಅಡಿ ಅಂತ ( 6 ಅಡಿನೇ ಏಕೆ?! ಪಾಶ್ಚ್ಯಾತ್ಯರ ಲೆಕ್ಕ ?! ) ಒಂದು ಯೋಜನ ಅಂದ್ರೆ ಸುಮಾರು 9 ಮೈಲುಗಳಾಗುತ್ತದೆ.
ಈ ಪ್ರಕಾರ ಅರ್ಧ ನಿಮಿಷದಲ್ಲಿ 2202 ಯೋಜನ ಅಂದ್ರೆ ಸೆಕೆಂಡಿಗೆ 185,794 ಮೈಲು ಅಂತ ಆಗುತ್ತದೆ ಮತ್ತು ಇದು ಅಧುನಿಕ ವಿಜ್ಞಾನದ ಲೆಕ್ಕಕ್ಕೆ ತುಂಬ ಹತ್ತಿರವಾಗಿದೆ.
ಈ ಲೆಕ್ಕವು ಆಧುನಿಕ ವಿಜ್ಞಾನಿಗಳು ಪರೀಕ್ಷಿಸಿದಾಗ ಸತ್ಯ ಎಂದು ಒಪ್ಪಿದ್ದಾರೆ. ಹಾಗಾದರೆ ಯಾಕೆ ತಡ ಭಾರತೀಯರಾದ ನಾವು ನಮ್ಮ ಮಿಂಚಿನಂತಹ ಶಕ್ತಿಯನ್ನು ಜಗದಗಲ ಸಾರೋಣ.
ಭಾರತದ ವೈಭವವನ್ನು ವಿಶ್ವದೆಲ್ಲಡೆ ತಿಳಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.