ಚೆನ್ನೈ: ಎರಡು ಕೆಟಗರಿಗಳ ದೇಶಿಯ ಬಹುಇಂಧನ ಟ್ಯಾಂಕ್ ಎಂಜಿನ್ಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇನೆಗೆ ಚೆನ್ನೈನಲ್ಲಿ ಹಸ್ತಾಂತರ ಮಾಡಿದರು.
ರಕ್ಷಣಾ ನಿರ್ಮಾಣ ಇಲಾಖೆಯಡಿಯಲ್ಲಿನ ಎಂಜಿನ್ ಫ್ಯಾಕ್ಟರಿ ಅವಧಿ (Engine Factory Avadi (EFA)) ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈ ಎರಡು ಎಂಜಿನ್ಗಳನ್ನು ನಿರ್ಮಾಣ ಮಾಡಿದೆ. ಮೊದಲ ಎಂಜಿನ್ 1000 ಹೆಚ್ಪಿ ಸಾಮರ್ಥ್ಯ ಹೊಂದಿದ್ದು, V92S2 ಪವರ್ T-90 ಭೀಷ್ಮ ಎಂದು ಹೆಸರಿಸಲಾಗಿದೆ. ಎರಡನೇಯ ಎಂಜಿನ್ V46-6 ಪವರ್ T72 ಅಜೇಯ ಎಂದು ಹೆಸರಿಸಲಾಗಿದೆ.
ರಷ್ಯಾ ವಿನ್ಯಾಸವನ್ನು ಬಳಸಿ ಎಂಜಿನ್ ಫ್ಯಾಕ್ಟರಿ ಅವಧಿ (EFA) ಈ ಎಂಜಿನ್ಗಳನ್ನು ನಿರ್ಮಾಣ ಮಾಡಿದ್ದು ಇದಕ್ಕೆ ಶೇ.100 ರಷ್ಟು ಭಾರತೀಯ ನಿರ್ಮಿತ ಬಿಡಿ ಭಾಗಗಳನ್ನೇ ಬಳಸಲಾಗಿದೆ. ಇದೇ ವರ್ಷ ಎಂಜಿನ್ ಫ್ಯಾಕ್ಟರಿ ಅವಧಿ ಮತ್ತೊಂದು ಸಂಪೂರ್ಣ ದೇಶಿ ನಿರ್ಮಿತ ಎಂಜಿನ್ನನ್ನು ಉತ್ಪಾದನೆ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.