ನವದೆಹಲಿ: ತೆರಿಗೆ ಕಡಿತ ಗ್ರಾಹಕರ ಮಟ್ಟಕ್ಕೆಯೇ ಇಳಿಕೆಯಾಗಿದ್ದು, ಇದರಿಂದಾಗಿ ಅವರ ಖರೀದಿ ಸಾಮರ್ಥ್ಯ ಹೆಚ್ಚಳವಾಗಲಿದೆ. ದೇಶದ ಆರ್ಥಿಕತೆಯಲ್ಲಿ ಖರೀದಿ ಏರಿಕೆಯಾಗಲಿದೆಯಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ಹೇಳಿದ್ದಾರೆ. 384 ವಸ್ತುಗಳ ಜಿಎಸ್ಟಿ ದರವನ್ನು ಈಗಾಗಲೇ ಇಳಕೆ ಮಾಡಲಾಗಿದೆ ಈ ಮೂಲಕ ಜಿಎಸ್ಟಿಯನ್ನು ನಿರಂತರವಾಗಿ ಪರಿಷ್ಕರಣೆಗೊಳಪಡಿಸಲಾಗುತ್ತಿದೆ.
ಯಾವುದೇ ವಸ್ತುಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿಲ್ಲ. ಇದು ಸ್ವಾತಂತ್ರ್ಯ ನಂತರದ ಅತೀದೊಡ್ಡ ಸಾಮೂಹಿಕ ತೆರಿಗೆ ಕಡಿತವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ತಮ್ಮ ಫೇಸಬುಕ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ತೆರಿಗೆ ಆದಾಯ ಹೆಚ್ಚಾದಂತೆ ಸಿಮೆಂಟ್, ಎರ್ ಕಂಡೀಶನರ್, ಟಿವ್ಹಿ ಮುಂತಾದವುಗಳ ಜಿಎಸ್ಟಿ ಕೂಡ ಇಳಿಕೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ದುಬಾರಿ ಮತ್ತು ಮಾರಕ ಎನಿಸುವ ವಸ್ತುಗಳ ತೆರಿಗೆ ಮಾತ್ರ ಅತೀ ಹೆಚ್ಚು ಅಂದರೆ ಶೇ.28ರಷ್ಟು ಇರಲಿದೆ ಎಂದು ಆವರು ಹೇಳಿದ್ದಾರೆ. ವಿವಿಧ 68 ಸೇವಾ ಕೆಟಗರಿಗಳ ತೆರಿಗೆಯನ್ನು ಇಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.