ಕಾಸರಗೋಡು : ದಿ. ಶ್ರೀ ಜನಾರ್ಧನ ಪ್ರತಾಪನಗರ ಇವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರವನ್ನು 29 ಜುಲೈ ಆದಿತ್ಯವಾರದಂದು ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಹೇರೂರು ಶಂಕರ ಆಳ್ವ ಮೆಮೋರಿಯಲ್ ಚಾರಿಟೇಬಲ್ ಸೊಸೈಟಿ, ಮಂಗಲ್ಪಾಡಿ ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಪಿ. ಬಂದ್ಯೋಡು ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಆರ್ಎಸ್ಎಸ್ನ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಕಲ್ಲಡ್ಕ ಪ್ರಭಾಕರ ಭಟ್ ನಡೆಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ||ಭರತ್ ಶೆಟ್ಟಿ, ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ನಾರಾಯಣ ಹೆಗ್ಡೆ ಕೋಡಿಬೈಲು, ಎಜೆ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಆಫೀಸರ್ ಡಾ|| ಅರವಿಂದ್, ಮಕ್ಕಳ ತಜ್ಞರಾದ ಡಾ|| ಜಿತೇಂದ್ರ ರೈ ಕಾಸರಗೋಡು ಉಪಸ್ಥಿತರಿದ್ದರು. ಜನಾರ್ದನ ಪ್ರತಾಪನಗರ ಕುರಿತಾದ ಪ್ರಸ್ತಾವನೆಯನ್ನು ಅವರ ಒಡನಾಡಿ ಶ್ರೀ ವೀರಪ್ಪ ಅಂಬಾರ್ ನಡೆಸಿದರು.
ಸ್ವಾಗತವನ್ನು ಶ್ರೀ ಸತೀಶ ಶೆಟ್ಟಿ ಮಾಸ್ಟರ್, ಧನ್ಯವಾದ ಶ್ರೀ ರಘು ಚೆರುಗೋಳಿ ಮತ್ತು ನಿರೂಪಣೆ ಶ್ರೀಧರ ಶೆಟ್ಟಿ ಪರಂಕಿಲ ನಡೆಸಿದರು. ಸುಮಾರು 125 ಮಂದಿ ರಕ್ತದಾನವನ್ನು ಮಾಡಿದರು. ಉಪ್ಪಳ KNH ಆಸ್ಪತ್ರೆಯ ಸಿಬ್ಬಂದಿಯವರು 100 ಜನರ ರಕ್ತದ ಗುಂಪು ನಿರ್ಣಯ (Bloodgroup) ಪರೀಕ್ಷೆ ನಡೆಸಿಕೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.