ಗುವಾಹಟಿ: ಹೆತ್ತವರನ್ನು, ವಿಕಲಚೇತನ ಒಡಹುಟ್ಟಿದವರನ್ನು ನಿರ್ಲಕ್ಷ್ಯ ಮಾಡುವ ಸರ್ಕಾರಿ ಉದ್ಯೋಗಿಗಳಿಗೆ ಚಾಟಿ ಬೀಸಲು ಅಸ್ಸಾಂ ಸರ್ಕಾರ ಮುಂದಾಗಿದೆ.
ಇದೇ ಆಗಸ್ಟ್ 2ರಿಂದ ವಯಸ್ಸಾದ ಹೆತ್ತವರನ್ನು, ವಿಕಲಚೇತನ ಒಡಹುಟ್ಟಿದವರನ್ನು ಸರ್ಕಾರಿ ಉದ್ಯೋಗಿಗಳು ನೋಡಿಕೊಳ್ಳುವುದು ಕಡ್ಡಾಯವಾಗಲಿದೆ. ಇದಕ್ಕೆ ತಪ್ಪಿದರೆ ಸರ್ಕಾರ ಅವರ ವೇತನವನ್ನು ಕಡಿತಗೊಳಿಸಲಿದೆ.
ಈ ಸಂಬಂಧ ಅಲ್ಲಿ ಕಾನೂನು ಕೂಡ ಜಾರಿಯಾಗಿದೆ. 2017ರಲ್ಲಿ ಅಸ್ಸಾಂನ ವಿಧಾನಸಭೆಯಲ್ಲಿ ಅಕೌಂಟೆಬಿಲಿಟಿ ಮತ್ತು ಮಾನಿಟರಿಂಗ್ (ಪ್ರಣಾಮ) ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ. ಈ ಮಸೂದೆಯನ್ವಯ ಸರ್ಕಾರಿ ಉದ್ಯೋಗಿಗಳು ತಮ್ಮ ವಯಸ್ಸಾದ ಹೆತ್ತವರನ್ನು ಮತ್ತು ವಿಕಲಚೇತನ ಒಡಹುಟ್ಟಿದವರನ್ನು ನೋಡಿಕೊಳ್ಳುವುದು ಕಡ್ಡಾಯ. ಇದಕ್ಕೆ ತಪ್ಪಿದರೆ ಅವರ ಶೇ.10ರಷ್ಟು ವೇತನ ಕಡಿತಗೊಳ್ಳುತ್ತದೆ ಮಾತ್ರವಲ್ಲ ಆ ಕಡಿತಗೊಂಡ ವೇತನ ಪೋಷಕರ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.