ನವದೆಹಲಿ: 22 ವರ್ಷದ ಮೀಜೋರಾಂನ ಯುವಕ ನುಟ್ಲೈ ಲಲ್ಬಿಕಿಮಾ ಬಾಕ್ಸಿಂಗ್ ಲೋಕದಲ್ಲಿ ಇತಿಹಾಸವನ್ನು ರಚಿಸಿದ್ದಾರೆ. ದುರಾದೃಷ್ಟವೆಂದರೆ, ಇಷ್ಟು ದೊಡ್ಡ ಸಾಧನೆ ಮಾಡಿದರೂ ಆತನ ಹೆಸರು ಮುನ್ನಲೆಗೆ ಬಂದಿಲ್ಲ. ಇತರ ಕ್ರೀಡಾಪಟುಗಳಂತೆ ಆತ ಸೆಲೆಬ್ರಿಟಿಯ ರೀತಿ ಮೆರೆಯಲಿಲ್ಲ. ಆದರೂ ಈಗ ಆತನ ಬಗ್ಗೆ ನಿಧಾನವಾಗಿ ತಿಳಿಯುತ್ತಿದೆ ಎಂಬುದೇ ಸಮಧಾನಕರ ವಿಷಯವಾಗಿದೆ.
ಮಿಜೋರಾಂನ ಸಣ್ಣ ಗ್ರಾಮ ಸಿಯಾಹಾದಿಂದ ಬಂದ ನುಟ್ಲೈ, 49 ಕೆಜಿ ವಿಭಾಗದಲ್ಲಿ ಹಾಲಿ ಒಲಿಂಪಿಕ್ ಲೈಟ್ ವೆಯಿಟ್ ಚಾಂಪಿಯನ್ನನ್ನು ಸೋಲಿಸಿ ಅದ್ಭುತ ಬಾಕ್ಸರ್ ಆಗಿ ಹೊರಹೊಮ್ಮಿದ್ದಾರೆ.
ಖಜಕೀಸ್ತಾನದ ಅಸ್ತಾನದಲ್ಲಿ ನಡೆದ ಪ್ರೆಸ್ಸಿಡೆಂಟ್ಸ್ ಕಪ್ ಟೂರ್ನಮೆಂಟ್ನಲ್ಲಿ 49 ಕೆಜಿ ವಿಭಾಗದಲ್ಲಿ ಹಸನ್ಬಾಯ್ ದಸ್ಮತೋವ್ ಅವರು ಸೋಲಿಸಿ ಸೆಮಿಫೈನಲ್ಗೆ ತಲುಪಿದ್ದಾರೆ. ವಿಶ್ವ ನಂ.1ನನ್ನು ಸೋಲಿಸಿ ದಾಖಲೆ ಬರೆದರೂ ಇವರು ರಾಷ್ಟ್ರೀಯ ವಾಹಿನಿಗಳಲ್ಲಿ ಹೆಚ್ಚು ಸುದ್ದಿಯಾಗಿಲ್ಲ ಎಂಬುದು ದುರಾದೃಷ್ಟ.
ಅತೀ ಬಡ ಕುಟುಂಬದಿಂದ ಬಂದ ನುಟ್ಲೈ, 2009ರಲ್ಲಿ ಬಾಕ್ಸಿಂಗ್ ಲೋಕಕ್ಕೆ ಪಾದಾರ್ಪಣೆ ಮಾಡಿದರು. 2015ರಲ್ಲಿ ಪ್ರೋ ಚಾಂಪಿಯನ್ ಆಗಿ ಹೊರಹೊಮ್ಮಿದರು, ಬಳಿಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡರು. ಪ್ರಸ್ತುತ ಇವರು ಸುರೊಂಜಾಯ್ ಸಿಂಗ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಭವಿಷ್ಯದಲ್ಲಿ ಭಾರತದ ಬಾಕ್ಸಿಂಗ್ ಕ್ರೀಡೆಯ ಅನರ್ಘ್ಯ ರತ್ನವಾಗುವ ಎಲ್ಲಾ ಸಾಮರ್ಥ್ಯವೂ ಇವರಿಗಿದೆ, ಆದರೆ ಸರ್ಕಾರ, ಜನರ ಬೆಂಬಲ ಅವರಿಗೆ ಅಗತ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.