ನವದೆಹಲಿ: ಅನಿವಾಸಿ ಭಾರತೀಯ ವಿವಾಹಗಳಲ್ಲಿ ನಡೆಯುವ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಕಠಿಣ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ.
ವಿದೇಶದಲ್ಲಿ ಕಾನೂನು ಬಾಹಿರವಾದ ರೀತಿಯಲ್ಲಿ ವಿವಾಹವಾದ ಮತ್ತು ವಿವಾಹಿತ ಪತ್ನಿ/ಪತಿಯನ್ನು ಭಾರತದಲ್ಲಿ ಒಂಟಿಯಾಗಿ ಬಿಟ್ಟು ವಿದೇಶಕ್ಕೆ ಪಲಾಯಣ ಮಾಡುವವರ, ಮಹಿಳಾ ಮತ್ತು ಮಕ್ಕಳ ಕಳ್ಳಸಾಗಾಣೆಯಲ್ಲಿ ತೊಡಗಿರುವವರ ವಿರುದ್ಧ ಈ ಕಾನೂನು ಸಮರ ಸಾರಲಿದೆ.
‘ವಿದೇಶದಲ್ಲಿ ನೆಲೆಸಿರುವ ಭಾರತೀಯ ಜನರ ವಿರುದ್ಧ ಸಮನ್ಸ್ ಮತ್ತು ವಾರೆಂಟ್’ ಕಾನೂನನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಇದರಡಿ ಪತ್ನಿಯನ್ನು ಒಂಟಿ ಮಾಡಿ ವಿದೇಶಕ್ಕೆ ಹಾರಿರುವವರ, ಅಕ್ರಮವಾಗಿ ಮದುವೆಯಾಗಿರುವವರ ಅನಿವಾಸಿ ಭಾರತೀಯ ಆಸ್ತಿಯನ್ನು ವಶಪಡಿಸಿಕೊಳ್ಳುವ ಅವಕಾಶ ಸಿಗಲಿದೆ.
ತಪ್ಪಿತಸ್ಥರನ್ನು ಘೋಷಿತ ಅಪರಾಧಿಗಳು ಎಂದು ಘೋಷಿಸಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.