ನವದೆಹಲಿ: ವಿಸ್ತಾರವಾದ ಅಭಿವೃದ್ಧಿ ಅಜೆಂಡಾವನ್ನು ಹೊಂದಿರುವ ಬಿಜೆಪಿ, 2019ರಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭೂತವಪೂರ್ವ ಯಶಸ್ಸನ್ನು ಕಾಣಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭರವಸೆ ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿ, ಧಾರ್ಮಿಕ ಆಧಾರದಲ್ಲಿ ಒಡೆಯುವಿಕೆ ನಮ್ಮ ಅಜೆಂಡಾದಲ್ಲಿಲ್ಲ ಎಂದಿದ್ದಾರೆ.
ನಾವು ರಾಜಕೀಯ ವಾತಾವರಣವನ್ನು ಕೋಮುವಾದೀಕರಣಗೊಳಿಸುತ್ತಿಲ್ಲ, ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಆಧಾರದಲ್ಲಿ ಜನರನ್ನು ಒಡೆಯುವುದು ನಮ್ಮ ಅಜೆಂಡಾವೂ ಅಲ್ಲ ಎಂದಿದ್ದಾರೆ.
ದೇಶದ ಪ್ರತಿ ಕ್ಷೇತ್ರಗಳಿಗೂ ಭೇಟಿ ನೀಡಿದ್ದೇನೆ, ಎಲ್ಲಾ ಕಡೆಯೂ ಹಿಂದೆಂದಿಗಿಂತಲೂ ಬಲಿಷ್ಠ ಬಿಜೆಪಿ ಅಲೆಯಿದೆ, ದೂರದಲ್ಲಿಯೂ ನಮಗೆ ಸವಾಲೊಡ್ಡುವವರು ಕಾಣುತ್ತಿಲ್ಲ ಎಂದಿದ್ದಾರೆ.
ಬಿಜೆಪಿ ಬೆಂಬಲಿಗರ ಸಂಖ್ಯೆ 11 ಕೋಟಿಗೆ ಏರಿದೆ, ಈ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ, ಅವರೆಲ್ಲರೂ ನಮ್ಮ ಮತದಾರರು ಎಂಬುದು ಖಚಿತ, ಇವರಲ್ಲಿ ಅರ್ಧದಷ್ಟು ಜನ ಮತ ನೀಡಿದರೂ ನಾವು ಸುಲಭವಾಗಿ ಈಜಬಹುದಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.