ನವದೆಹಲಿ: ಫ್ಲೈಟ್ ಅಟೆಂಡೆಂಟ್ಗಳ ಮಾದರಿಯಲ್ಲೇ ಪ್ರಯಾಣಿಕರು ತಿಂದುಳಿದ ಆಹಾರ, ಇತ್ಯಾದಿ ತ್ಯಾಜ್ಯಗಳನ್ನು ಸಂಗ್ರಹ ಮಾಡಲು ರೈಲ್ವೇ ಕ್ಯಾಟರಿಂಗ್ ಸ್ಟಾಫ್ ಟ್ರ್ಯಾಶ್ ಬ್ಯಾಗ್ಗಳನ್ನು ಬಳಸಲಿದೆ.
ಆಹಾರದಿಂದ ಹಿಡಿದು ವ್ಯಾಕ್ಯೂಂ ಟಾಯ್ಲೆಟ್ಗಳವರೆಗೂ ವಿಮಾನಗಳಲ್ಲಿನ ಮಾದರಿಯನ್ನು ಅನುಸರಿಸಲು ರೈಲ್ವೇ ಪ್ರಯತ್ನಿಸುತ್ತಿದೆ. ಪ್ರಯಾಣಿಕರಿಗೆ ವಿಮಾನ ಮಾದರಿ ಸೌಕರ್ಯವನ್ನು ಕಲ್ಪಿಸಿಕೊಡುವುದು ಅದರ ಉದ್ದೇಶವಾಗಿದೆ.
ರೈಲುಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ, ಕೇಟರಿಂಗ್ ಸಿಬ್ಬಂದಿಗಳು ಪ್ರಯಾಣಿಕರಿಗೆ ಆಹಾರ ವಿತರಿಸುವ ಬಳಿಕ ಟ್ರ್ಯಾಶ್ ಬ್ಯಾಗ್ಗಳನ್ನು ಅವರ ಬಳಿಗೆ ಕೊಂಡೊಯ್ದು ಮಿಕ್ಕುಳಿದ ಆಹಾರ, ವೇಸ್ಟೇಜ್ಗಳನ್ನು ಸಂಗ್ರಹಿಸುತ್ತಾರೆ. ಇದರಿಂದ ರೈಲಿನೊಳಗೆ ಆಹಾರದ ತುಣಕು, ಕಸಗಳು ಬೀಳುವುದು ತಪ್ಪುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.