ನವದೆಹಲಿ: ಆರ್ಚರಿಯಲ್ಲಿ ಭಾರತ ಇತಿಹಾಸವನ್ನು ನಿರ್ಮಿಸಿದೆ, ಮಹಿಳಾ ತಂಡ ಕೆಟಗರಿಯಲ್ಲಿ ಭಾರತ ವಿಶ್ವದಲ್ಲೇ ಟಾಪ್ ರ್ಯಾಂಕ್ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಚೀನಾ ಇದೆ.
ವಿ.ಜ್ಯೋತಿ ಸುರೇಖಾ, ತ್ರಿಶಾ ದೇಬ್, ಪಿ.ಲಿಲ್ಲಿ ಚಾನು, ಮುಸ್ಕಾನ್ ಕಿರರ್, ದಿವ್ಯಾ ದಯಾಳ್, ಮಧುಮಿತ ಅವರನ್ನೊಳಗೊಂಡ ಭಾರತೀಯ ತಂಡ 342.6 ಅಂಕಗಳನ್ನು ಗಳಿಸಿ ಟಾಪ್ ರ್ಯಾಂಕಿಂಗ್ನಲ್ಲಿದೆ. ಎರಡನೇ ಸ್ಥಾನದಲ್ಲಿರುವ ಚೈನೀಸ್ ತೈಪೆ ಭಾರತಕ್ಕಿಂತ 6 ಅಂಕ ಕಡಿಮೆ ಪಡೆದಿದೆ.
ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ ಈ ವಿಷಯವನ್ನು ಟ್ವಿಟರ್ನಲ್ಲಿ ಘೋಷಿಸಿದ್ದು, ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದೆ.
‘ಮಹಿಳಾ ಆರ್ಚರಿ ತಂಡ ವಿಶ್ವದಲ್ಲೇ ಪ್ರಥಮ ಸ್ಥಾನ ಪೊಡೆದುಕೊಂಡು ಇತಿಹಾಸ ನಿರ್ಮಿಸಿದೆ, ಈ ಸ್ಥಾನ ತಲುಪಲು ಕಠಿಣ ಪರಿಶ್ರಮಪಟ್ಟ ಎಲ್ಲಾ ಮಹಿಳೆಯರಿಗೂ ಅಭಿನಂದನೆಗಳು’ ಎಂದಿದೆ.
Compound women team earned top rank in world and created history in #Indian #archery… congratulations to all the team members who worked really hard for getting this position.
Congratulations and thanks to each and every person behind this achievement. 🇮🇳🇮🇳 #worldranking pic.twitter.com/9bmo8PvvN4— ARCHERY ASSOCIATION OF INDIA (@india_archery) July 26, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.