ನವದೆಹಲಿ: ಇಬ್ಬರು ಭಾರತೀಯರು ಈ ಬಾರಿಯ ರಮೊನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭರತ್ ವಟ್ವಾನಿ ಮತ್ತು ಸೋನಂ ವಾಂಗ್ಚುಕ್ ನೋಬೆಲ್ ಪ್ರಶಸ್ತಿಯ ಏಷ್ಯಾ ವರ್ಶನ್ ಎಂದೇ ಕರೆಯಲ್ಪಡುವ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಒಟ್ಟು 6 ವ್ಯಕ್ತಿಗಳನ್ನು ರಮೊನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಭರತ್ ಮತ್ತು ಸೋನಮ್ ಕೂಡ ಸೇರಿದ್ದಾರೆ.
ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿರುವುದಕ್ಕೆ ವಟ್ವಾನಿ ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವಾಂಗ್ಚುಕ್ ಅವರು ಈಶಾನ್ಯದ ಕುಗ್ರಾಮಗಳಲ್ಲಿ ಶಿಕ್ಷಣವನ್ನು ಪ್ರಚಾರಪಡಿಸುತ್ತಿದ್ದಾರೆ. ಲಡಾಖ್ ಯುವಕರ ಬದುಕು ಬದಲಾಯಿಸುವ ಕಾರ್ಯದಲ್ಲಿ ಇವರು ನಿರತರಾಗಿದ್ದಾರೆ. ತ್ರೀ ಈಡಿಯೇಟ್ ಸಿನಿಮಾದ ಫುನ್ಸುಕ್ ವಾಂಗ್ಡು ಇವರಿಂದ ಪ್ರೇರಿತಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.