ಭುವನೇಶ್ವರ: 46 ವರ್ಷಗಳ ಸುಧೀರ್ಘ ಕಾಯುವಿಕೆಯ ಬಳಿಕ ಒರಿಸ್ಸಾದ ಮಲ್ಕನ್ಗಿರಿ ಜಿಲ್ಲೆಯಲ್ಲಿ 910 ಮೀಟರ್ ಉದ್ದದ ಸೇತುವೆ ನಿರ್ಮಾಣಗೊಂಡಿದೆ. ಗುರುವಾರ ಸಿಎಂ ನವೀನ್ ಪಟ್ನಾಯಕ್ ಅವರು ಇದನ್ನು ಉದ್ಘಾಟನೆಗೊಳಿಸಿದ್ದಾರೆ.
ಈ ಸೇತುವೆ ಮಲ್ಕನ್ಗಿರಿ ಜಿಲ್ಲೆಯ ಪ್ರಮುಖ 151 ಗ್ರಾಮಗಳನ್ನು ಸಂಪರ್ಕಿಸಲಿದೆ. 1972ರಲ್ಲಿ ಇಲ್ಲಿಗೆ ಬಲಿಮೆಲ ಹೈಡ್ರೋ ಪವರ್ ಪ್ರಾಜೆಕ್ಟ್ ಬಂದಾಗ ಇಲ್ಲಿನ ಅಣೆಕಟ್ಟನ್ನು ತೆಗೆಯಲಾಯಿತು, ಇದರಿಂದಾಗಿ ಪ್ರಯಾಣಿಸಲು ಇಲ್ಲಿನ ಜನ ದೋಣಿಯನ್ನೇ ಆಶ್ರಯಿಸಬೇಕಾಯಿತು. ಕೃಷಿ ಬೆಳೆಗಳನ್ನು ನಗರಗಳಿಗೆ ಕೊಂಡೊಯ್ಯಲು ಜನ ಪರದಾಡಬೇಕಾಗುತ್ತಿತ್ತು. ಗಂಭೀರ ಆರೋಗ್ಯ ಸಮಸ್ಯೆಗಳಾದಾಗ ತೊಂದರೆಗೀಡಾಗಬೇಕಾಗುತ್ತಿತ್ತು.
46 ವರ್ಷಗಳ ಸುಧೀರ್ಘ ಕಾಯುವಿಕೆಯ ಬಳಿಕ ಈಗ ಅಲ್ಲಿ ಸೇತುವೆಯ ನಿರ್ಮಾಣವಾಗಿದೆ. ಇದರಿಂದ 151 ಗ್ರಾಮಗಳ ಜನರ ಸಂಕಷ್ಟ ದೂರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.