ನವದೆಹಲಿ: ಆಡಳಿತದಲ್ಲಿ ಜಂಟಿ ಕಾರ್ಯದರ್ಶಿಯಾಗಲು ಖಾಸಗಿ ವಲಯದ 10 ತಜ್ಞರನ್ನು ನೇಮಕ ಮಾಡುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿತ್ತು. ಕೇವಲ ಭಾರತೀಯ ನಾಗರಿಕ ಸೇವೆಯ ಸದಸ್ಯರಿಗೆ ಮೀಸಲಾಗಿದ್ದ ಈ ಹುದ್ದೆಗಳನ್ನು ಜನಸಾಮಾನ್ಯರಿಗೂ ನೀಡುವ ಮಹತ್ವದ ನಿರ್ಧಾರ ಇದಾಗಿದೆ. ಈಗಾಗಲೇ ಈ ಹುದ್ದೆಗಳಿಗೆ 3 ಸಾವಿರ ಅರ್ಜಿಗಳು ಬಂದಿವೆ.
ಜೂನ್ 10ರಂದು ಸರ್ಕಾರ 10 ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ’ ಮೂಲಕ ನೇಮಕಾತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿತ್ತು, ದಿನ ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಿತ್ತು. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಕೋರಿತ್ತು. ಜುಲೈ 30 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.
ಈಗಾಗಲೇ 3 ಸಾವಿರ ಅರ್ಜಿಗಳು ಬಂದಿದ್ದು, ಕೊನೆ ದಿನಾಂಕ ಮುಗಿಯುದರೊಳಗೆ ಅರ್ಜಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಅಂತಾರಾಷ್ಟ್ರೀಯ ಸಂಸ್ಥೆ, ಬುಹು ರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ 15 ವರ್ಷ ಅನುಭವ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.