ನವದೆಹಲಿ: ದೇಶದಲ್ಲಿ ಇಂದು ಕಾರ್ಗಿಲ್ ವಿಜಯ್ ದಿವಸ್ನ್ನು ಆಚರಣೆ ಮಾಡಲಾಗುತ್ತಿದೆ. 1990ರ ಯುದ್ಧದಲ್ಲಿ ಪಾಕಿಸ್ಥಾನವನ್ನು ಮಣಿಸಿ ವಿಜಯ ಪತಾಕೆ ಹಾರಿಸಿದ ವೀರ ಯೋಧರಿಗೆ ಗೌರವಾರ್ಪಣೆ ಮಾಡಲಾಗುತ್ತಿದೆ.
ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಟ್ವಿಟ್ ಮಾಡಿರುವ ಮೋದಿ, ‘ಆಪರೇಶನ್ ವಿಜಯ್ನಲ್ಲಿ ಪಾಲ್ಗೊಂಡು ದೇಶದ ಸೇವೆ ಮಾಡಿದ ಸೇನಾನಿಗಳನ್ನು ದೇಶ ನಮಿಸುತ್ತಿದೆ. ನಮ್ಮ ಯೋಧರು ನಮ್ಮ ದೇಶವನ್ನು ಭದ್ರವಾಗಿಟ್ಟಿದ್ದಾರೆ ಮತ್ತು ನಮ್ಮ ಶಾಂತಿಯುತ ವಾತಾವರಣವನ್ನು ಕೆಡಿಸಲು ಬಂದವರಿಗೆ ತಕ್ಕ ಉತ್ತರ ನೀಡಿದ್ದಾರೆ’ ಎಂದರು.
‘ಆಪರೇಶನ್ ವಿಜಯ್ ವೇಳೆ ಅಟಲ್ ಬಿಹಾರಿ ವಾಜಪೇಯಿ ನೀಡಿದ ಅಪ್ರತಿಮ ನಾಯಕತ್ವವನ್ನೂ ದೇಶ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದೆ. ನಾಯಕತ್ವ ವಹಿಸಿ, ಸೇನೆಗೆ ಬೆಂಬಲವಿತ್ತು, ಭಾರತದ ನಿಲುವನ್ನು ವಿಶ್ವದ ಎದುರು ದೃಢಪಡಿಸಿದ್ದಾರೆ’ ಎಂದರು.
1999ರ ಕಾರ್ಗಿಲ್ ಯುದ್ಧ ನಡೆದು ಇಂದಿಗೆ 19 ವರ್ಷಗಳು ಸಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.