ನವದೆಹಲಿ: ತನ್ನ ರಿಲಾಯನ್ಸ್ ಗ್ರೂಪ್ಗೆ ರಫೆಲ್ ಫೈಟರ್ ಜೆಟ್ ಒಪ್ಪಂದವನ್ನು ಪಡೆದುಕೊಳ್ಳಲು ಸಮರ್ಥ ಅನುಭವವಿಲ್ಲ ಎಂಬ ಆರೋಪವನ್ನು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ತಳ್ಳಿಹಾಕಿದ್ದಾರೆ. ಮಾತ್ರವಲ್ಲ ಫ್ರೆಂಚ್ ಗ್ರೂಪ್ ಡಸಾಲ್ಟ್, ತನ್ನನ್ನು ಸ್ಥಳೀಯ ಪಾಲುದಾರನನ್ನಾಗಿಸಿರುವುದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ.
8 ತಿಂಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಅನಿಲ್ ಅಂಬಾನಿ ಈ ವಿಷಯವನ್ನು ಉಲ್ಲೇಖಿಸಿದ್ದು, ತನ್ನ ಕಂಪನಿ ಯಾಕೆ ಮಲ್ಟಿ-ಬಿಲಿಯನ್ ಡಾಲರ್ ಪ್ರಾಜೆಕ್ಟ್ನ್ನು ಪಡೆದುಕೊಂಡಿತು ಎಂಬುದನ್ನೂ ವಿವರಿಸಿದ್ದಾರೆ.
2017ರ ಡಿ.12ರಂದು ಅಂಬಾನಿ ರಾಹುಲ್ಗೆ ಪತ್ರ ಬರೆದಿದ್ದಾರೆ, ಇದರಲ್ಲಿ ತನ್ನ ಕುಟುಂಬ ಮತ್ತು ಗಾಂಧಿ ಕುಟುಂಬದ ಗೌರವಪೂರ್ಣ ಸಂಬಂಧದ ಬಗ್ಗೆಯೂ ಅವರು ವಿವರಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ನಾಯಕರು ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಮಾಡುತ್ತಿರುವ ಆರೋಪಗಳು ದುರಾದೃಷ್ಟಕರ ಮತ್ತು ವೈಯಕ್ತಿಕವಾಗಿ ನನಗೆ ನೋವು ತಂದಿದೆ ಎಂಬುದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
‘ನಮಗೆ ಅಗತ್ಯವಾದ ಅನುಭವವೂ ಇದೆ ಮತ್ತು ರಕ್ಷಣಾ ಉತ್ಪಾದನೆಯ ಹಲವು ಆಯಾಮಗಳಲ್ಲಿ ನಾವು ನಾಯಕತ್ವವನ್ನೂ ಪಡೆದುಕೊಂಡಿದ್ದೇವೆ’ ಎಂದು ರಾಹುಲ್ಗೆ ವಿವರಿಸುವ ಪ್ರಯತ್ನವನ್ನು ಅಂಬಾನಿ ಮಾಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.