ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 3,700 ನಕ್ಸಲರು ಶರಣಾಗತರಾಗಿದ್ದಾರೆ ಎಂದು ಕೇಂದ್ರ ರಾಜ್ಯಸಭೆಗೆ ಮಾಹಿತಿ ನೀಡಿದೆ.
‘ಕೇಂದ್ರ ಗೃಹಖಾತೆಯಲ್ಲಿನ ಮಾಹಿತಿಯ ಪ್ರಕಾರ 3,714 ಎಡ ಪಂಥೀಯ ಉಗ್ರರು ಶಸ್ತ್ರ ತ್ಯಾಗ ಮಾಡಿ ಶರಣಾಗತರಾಗಿದ್ದಾರೆ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ಕುಮಾರ್ ಹೆಗ್ಡೆ ಹೇಳಿದ್ದಾರೆ.
ಶರಣಾಗತರಾದ ಯಾವ ನಕ್ಸಲರಿಗೂ ಕೇಂದ್ರ ಸರ್ಕಾರ ಐಟಿಐ ಕೌಶಲ್ಯ ತರಬೇತಿಯಲ್ಲಿ ಪಾಲ್ಗೊಳ್ಳಲು ಬೇಕಾದ ಅರ್ಹತೆ ಇರಲಿಲ್ಲ, ಹೀಗಾಗಿ ಸರ್ಕಾರ ಕೆಲವೊಂದು ವಿನಾಯಿತಿಗಳನ್ನು ಅವರಿಗೆ ನೀಡಿ ಅವರನ್ನು ಕೌಶಲ್ಯ ತರಬೇತಿಗೆ ಪ್ರವೇಶಾತಿ ಪಡೆಯುವಂತೆ ಮಾಡುತ್ತಿದೆ ಎಂದು ರಾಜ್ಯಸಭೆಗೆ ಅವರು ಲಿಖಿತ ಉತ್ತರ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.