ತಿರುವನಂತಪುರಂ: ಕೇರಳದಲ್ಲಿ ಈ ಬಾರಿ ಮುಂಗಾರುವಿನ ಅಬ್ಬರ ಜೋರಾಗಿದ್ದು, ಅಲ್ಲಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲು ಆರಂಭಿಸಿವೆ. ಹಲವಾರು ಭಾಗಗಳಲ್ಲಿ ನೆರೆ ಸಂಭವಿಸಿದ್ದು, ನೌಕಾ ಸೇನೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ನೆರೆ ಸಂಭವಿಸಿರುವ ಭಾಗಗಳಲ್ಲಿ ನೌಕೆ ತನ್ನ ಡೈವಿಂಗ್ ಟೀಮ್ಗಳನ್ನು ನಿಯೋಜನೆಗೊಳಿಸಿದೆ.. ನದಿಗಳ ಸಮೀಪದಲ್ಲಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
5 ನೌಕಾ ದೋಣಿಗಳು ಮತ್ತು 25ಡೈವರ್ಗಳನ್ನು ಜುಲೈ 21ರಂದು ಅಲೆಪ್ಪಿಗೆ ಕಳುಹಿಸಿಕೊಡಲಾಗಿದೆ. ನೌಕೆಯ ಮತ್ತೊಂದು ಡೈವಿಂಗ್ ತಂಡ ಮಲ್ಲಪುರಂಗೆ ಜಿಲ್ಲೆಗೆ ತೆರಳಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದೆ. ಜುಲೈ 23ರಂದು ಮಾತೃಭೂಮಿ ಪತ್ರಿಕೆಯ ಐವರು ಪತ್ರಕರ್ತರನ್ನು ನೌಕಾ ಸಿಬ್ಬಂದಿ ನೆರೆಯಿಂದ ಕಾಪಾಡಿದ್ದಾರೆ ಎನ್ನಲಾಗಿದೆ.
ಹಲವಾರು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಬಾಧಿಸಿದೆ, ವಿದ್ಯುತ್ ಕೈಕೊಟ್ಟಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.