ನವದೆಹಲಿ: ಕಾನೂನು ಜಾರಿ ಸಂಸ್ಥೆಗಳ ಒತ್ತಾಯದ ಮೇರೆಗೆ ಫೇಸ್ಬುಕ್ ಮತ್ತು ಟ್ವಿಟರ್ಗಳು ಸುಮಾರು 1,662 ಅವಹೇಳನಕಾರಿ ಎನಿಸಿದ ವೆಬ್ಸೈಟ್ ಮತ್ತು ಕಂಟೆಂಟ್ಗಳನ್ನು ಬ್ಲಾಕ್ ಮಾಡಿದೆ ಎಂದು ಕೇಂದ್ರ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಫೇಸ್ಬುಕ್ಗೆ 1,076 ಯುಆರ್ಎಲ್ಗಳನ್ನು ಬ್ಲಾಕ್ ಮಾಡಲು ಮನವಿ ಬಂದಿತ್ತು, ಅದರಲ್ಲಿ 956 ಯುಆರ್ಎಲ್ಗಳನ್ನು ಬ್ಲಾಕ್ ಮಾಡಲಾಗಿದೆ. ಟ್ವಿಟರ್ಗೆ 728 ಯುಆರ್ಎಲ್ಗಳನ್ನು ಬ್ಲಾಕ್ ಮಾಡಲು ಮನವಿ ಬಂದಿದ್ದು, ಅದರಲ್ಲಿ 409ನ್ನು ಬ್ಲಾಕ್ ಮಾಡಿದೆ, ಯೂಟ್ಯೂಬ್ಗೆ 182 ಯುಆರ್ಎಲ್ ಬ್ಲಾಕ್ಗೆ ಮನವಿ ಬಂದಿದ್ದು, 152ನ್ನು ಬ್ಲಾಕ್ ಮಾಡಿದೆ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಇನ್ಸ್ಟಾಗ್ರಾಂ 150 ಮನವಿಗಳ ಪೈಕಿ 66 ಯುಆರ್ಎಲ್ಗಳನ್ನು ಬ್ಲಾಕ್ ಮಾಡಿದೆ, ಇತರರು 109 ಮನವಿಗಳ ಪೈಕಿ 76 ಯುಆರ್ಎಲ್ಗಳನ್ನು ನಿಷೇಧಿಸಿದ್ದಾರೆ.
2017ರ ಜನವರಿಯಿಂದ 2018ರ ಜೂನ್ವರೆಗೆ 1,662 ವೆಬ್ಸೈಟ್, ಕಂಟೆಂಟ್ಗಳ ನಿಷೇಧ ಪ್ರಕ್ರಿಯೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.