ನವದೆಹಲಿ: ಅಮೆರಿಕಾದೊಂದಿಗಿನ ರೂ.6,500 ಕೋಟಿ ಮೊತ್ತದ (NASAM) ಮಿಸೈಲ್ ಡೀಲ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಡಿಫೆನ್ಸ್ ಅಕ್ವಿಝೇಶನ್ ಕೌನ್ಸಿಲ್ ಅನುಮೋದನೆಯನ್ನು ನೀಡಿದೆ.
ಈ ಸರ್ಕಾರದಿಂದ ಸರ್ಕಾರ ನಡುವಣ ಡೀಲ್ನ್ನು ಅನುಷ್ಠಾನಕ್ಕೆ ತರುವಂತೆ ಅಮೆರಿಕಾಗೆ ಭಾರತದ ಸರ್ಕಾರ ಮನವಿ ಪತ್ರವನ್ನು ಶೀಘ್ರದಲ್ಲೇ ಕಳುಹಿಸುವ ನಿರೀಕ್ಷೆ ಇದೆ.
ದೇಶದೊಳಗೆ ಶತ್ರುಗಳಿಂದ ಮಿಸೈಲ್, ಏರ್ಕ್ರಾಫ್ಟ್, ಡ್ರೋನ್ ದಾಳಿಗಳು ನಡೆಯುವ ಸಂಭಾವ್ಯತೆಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಭಾರತ ಅಮೆರಿಕಾದೊಂದಿಗೆ ಈ ಡೀಲ್ನ್ನು ಮಾಡಿಕೊಳ್ಳಲು ನಿರ್ಧರಿಸಿದೆ.
ಇದೇ ಯ್ಯಾಂಟಿ ಮಿಸೈಲ್ ಕ್ಷಿಪಣಿಗಳನ್ನು ಈಗಾಗಲೇ ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿಸಿಯನ್ನು ಗಾರ್ಡ್ ಮಾಡಲು 2005ರಿಂದ ಬಳಕೆ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.