ದಿಸ್ಪುರ್: ಅಸ್ಸಾಂ ಸಂಪೂರ್ಣ ಸ್ವಚ್ಛತೆಯ ಗುರಿಯನ್ನು ತಲುಪುವ ಹಾದಿಯಲ್ಲಿದೆ. ಈಗಾಗಲೇ ಅಲ್ಲಿ ‘ಸ್ವಚ್ಛ ಭಾರತ’ದಡಿಯ ಶೇ.88ರಷ್ಟು ಕಾರ್ಯಗಳು ಪೂರ್ಣಗೊಂಡಿದೆ. 2014ರ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆಯನ್ನು ನೀಡಿದ್ದರು.
2019ರ ಅಕ್ಟೋಬರ್ 2ರ ವೇಳೆಗೆ ಸಂಪೂರ್ಣ ಭಾರತವನ್ನು ಬಯಲು ಶೌಚ ಮುಕ್ತಗೊಳಿಸುವುದು, ರಸ್ತೆ, ಬೀದಿಗಳನ್ನು ಸ್ವಚ್ಛಗೊಳಿಸುವುದು, ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಆಶಯಗಳಾಗಿದ್ದವು. ಕೆಲವೊಂದು ರಾಜ್ಯಗಳು ಮಾತ್ರ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯೋನ್ಮುಖಗೊಂಡು ಸ್ವಚ್ಛತೆಯ ಗುರಿಯ ಸಮೀಪದಲ್ಲಿವೆ.
ಅಸ್ಸಾಂ ಶೇ.88ರಷ್ಟು ಸ್ವಚ್ಛತಾ ಗುರಿಯನ್ನು ತಲುಪಿದ್ದು, ಅಲ್ಲಿನ 13,992 ಗ್ರಾಮಗಳು ಬಯಲು ಶೌಚಮುಕ್ತಗೊಂಡಿವೆ. ಯೋಜನೆಯಡಿ 601 ಗ್ರಾಮಗಳಲ್ಲಿ 94 ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.