ನವದೆಹಲಿ: ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಇರಾನ್ ಭಾರತದ ಎರಡನೇ ಅತೀದೊಡ್ಡ ಇಂಧನ ಪೂರೈಕಾ ರಾಷ್ಟ್ರವಾಗಿ ಹೊರಹೊಮ್ಮಿದೆ. ಇರಾಕ್ ನಂ.1 ಸ್ಥಾನದಲ್ಲಿದೆ.
ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತ 5.22 ಮಿಲಿಯನ್ ಟನ್ ತೈಲವನ್ನು ಸೌದಿ ಅರೇಬಿಯಾದಿಂದ ಖರೀದಿ ಮಾಡಿದೆ, ಇರಾನ್ನಿಂದ 5.6 ಮಿಲಿಯನ್ ಟನ್ ತೈಲವನ್ನು ಖರೀದಿಸಿದೆ. ಇರಾಕ್ನಿಂದ 7.27 ಮಿಲಿಯನ್ ಖರೀದಿ ಮಾಡಿದೆ.
ಇರಾನ್ ಎರಡನೇ ಅತೀದೊಡ್ಡ ತೈಲ ಪೂರೈಕಾ ರಾಷ್ಟ್ರವಾಗಿ ಹೊರಹೊಮ್ಮಿದರೂ, ವರ್ಷದಿಂದ ವರ್ಷಕ್ಕೆ ಆ ರಾಷ್ಟ್ರದಿಂದ ಖರೀದಿ ಮಾಡುವ ತೈಲದ ಪ್ರಮಾಣ ಕಡಿಮೆಯಾಗುತ್ತಾ ಸಾಗಿದೆ.
2017ರ ಹಣಕಾಸು ವರ್ಷಾಂತ್ಯಕ್ಕೆ ಇರಾನ್ನಿಂದ 13.04 ಮಿಲಿಯನ್ ಟನ್ ತೈಲ ಖರೀದಿ ಮಾಡಲಾಗಿತ್ತು, 2018ರ ಹಣಕಾಸು ವರ್ಷಾಂತ್ಯಕ್ಕೆ 9.8 ಮಿಲಿಯನ್ ಟನ್ ಖರೀದಿ ಮಾಡಲಾಗಿತ್ತು. ಈ ವರ್ಷ ಅದು 5.6ಕ್ಕೆ ಇಳಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.