ರಾವಂಡ: ಭಾರತೀಯ ಸಮುದಾಯ ವಿಶ್ವವ್ಯಾಪಿಯಾಗಿ ತನ್ನ ಹೆಗ್ಗರುತನ್ನು ಮೂಡಿಸಿದೆ, ಅನಿವಾಸಿ ಭಾರತೀಯರು ದೇಶದ ‘ರಾಷ್ಟ್ರದೂತರು’ ಎಂದು ರುವಾಂಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರುವಾಂಡಾದಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಲ್ಲಿರುವ ಭಾರತೀಯರು ರುವಾಂಡಾದ ಪ್ರಗತಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ ಮತ್ತು ಸಾಕಷ್ಟು ಸಮುದಾಯ ಸೇವೆಯನ್ನು ಮಾಡುತ್ತಿದ್ದಾರೆ ಎಂಬುದನ್ನು ಕೇಳಿ ನನಗೆ ಅತೀವ ಸಂತೋಷವಾಯಿತು’ ಎಂದಿದ್ದಾರೆ.
ರುವಾಂಡಾ ಆಫ್ರಿಕಾದ ಅತೀ ವೇಗದ ಆರ್ಥಿಕ ಪ್ರಗತಿ ಕಾಣುತ್ತಿರುವ ರಾಷ್ಟ್ರವಾಗಿದೆ, ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ಭೇಟಿಕೊಡುತ್ತಿರುವುದು ಇದೇ ಮೊದಲು.
ಎರಡು ದಿನಗಳ ಭೇಟಿಗಾಗಿ ರುವಾಂಡಾಕ್ಕೆ ತೆರಳಿರುವ ಮೋದಿ, ಅಲ್ಲಿನ ಸರ್ಕಾರದ ಗಿರಿಂಕಾ ಯೋಜನೆಗೆ 200 ಹಸುಗಳನ್ನು ಉಡುಗೊರೆ ನೀಡಿದ್ದಾರೆ.
ಅಲ್ಲಿರುವ ಭಾರತೀಯರ ಬಹುಕಾಲದ ಬೇಡಿಕೆಯಂತೆ, ಅಲ್ಲಿ ಭಾರತೀಯ ಹೈಕಮಿಷನ್ನನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.