ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 23-7-2018 ಸೋಮವಾರ ಪೂರ್ವಗುರುಕುಲದ 1ನೇ ತರಗತಿ ಮಕ್ಕಳಿಗೆ ಸವಿರುಚಿ ಎಂಬ ಪಾಠದ ಪ್ರಾತ್ಯಕ್ಷಿತಾ ಚಟುವಟಿಕೆ ಮತ್ತು ಸಹಭೋಜನ ಕಾರ್ಯಕ್ರಮ ನಡೆಯಿತು.
ಒಂದನೆ ತರಗತಿಯ ಆರು ವಿಭಾಗದ ವಿದ್ಯಾರ್ಥಿಗಳಿಂದ ಪತ್ರೊಡೆ, ನೀರುದೋಸೆ, ಒಂದೆಲಗ ಮತ್ತು ಕೊತ್ತಂಬರಿ ಸೊಪ್ಪಿನಚಟ್ನಿ ತರಿಸಲಾಯಿತು. ವಿದ್ಯಾರ್ಥಿಗಳು ತಂದ ತಿಂಡಿಯನ್ನು ಒಟ್ಟು ಸೇರಿಸಿ ಆ ತಿಂಡಿಯನ್ನು ತಯಾರಿಸುವ ವಿಧಾನ ಮತ್ತು ತಿಂಡಿ ತಯಾರಿಸಲು ಬಳಸಿರುವ ಆಹಾರ ವಸ್ತುಗಳ ಪರಿಚಯವನ್ನು ಮಾಡಲಾಯಿತು.
ವಿದ್ಯಾಕೇಂದ್ರದ ಹಿರಿಯರು, ಮಾರ್ಗದರ್ಶಕರಾದಂತಹ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಒಂದನೇ ತರಗತಿಯ 173 ಮಕ್ಕಳಿಗೂ ತಮ್ಮ ಕೈಯಾರೆ ತಿಂಡಿಯನ್ನು ಬಡಿಸಿದರು. ಮಕ್ಕಳು ಆನಂದದಿಂದ ಎಲ್ಲಾ ತಿಂಡಿಗಳ ರುಚಿಯನ್ನು ಸವಿದರು.
ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಶ್ರೀಮಾನ್, ಡಾ| ಕಮಲಾ ಪ್ರಭಾಕರ ಭಟ್, ಪೂರ್ವಗುರುಕುಲದ ಮಾರ್ಗದರ್ಶಕರಾದ ಭಗಿನಿ ಗಂಗಾ ಮಾತಾಜಿ, ಪ್ರಾಥಮಿಕ ವಿಭಾಗದ ಮುಖೋಪಾಧ್ಯಾಯರಾದ ಶ್ರೀರವಿರಾಜ್ ಕಣಂತೂರು ಚಟುಟಿಕೆಯಲ್ಲಿ ಮಾರ್ಗದರ್ಶನ ಮಾಡಿ ಮಕ್ಕಳೊಂದಿಗೆ ಸಹಭೋಜನ ಮಾಡಿದರು. ಹಾಗೂ 1 ನೇ ತರಗತಿಯ ಎಲ್ಲಾ ಮಾತಾಜಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.