ನವದೆಹಲಿ: ಭಾರತದ ಬಾರ್ಡರ್ ರೋಡ್ಸ್ ಆರ್ಗನೈಝೇಶನ್(ಬಿಆರ್ಓ) ಭೂತಾನ್ನ ಪ್ರಮುಖ ರಸ್ತೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಈ ರಸ್ತೆ ಆ ದೇಶದ ಗಡಿ ನಗರವಾದ ಫುವೆಂಟ್ಹೋಲಿಂಗ್ನ್ನು ರಾಜಧಾನಿ ಥಿಂಫುವಿನೊಂದಿಗೆ ಸಂಪರ್ಕಿಸುತ್ತದೆ.
ಸುಮಾರು 30 ಕಿಲೋಮೀಟರ್ ಉದ್ದ ದಾಮ್ಚು -ಚುಖಾ ರಸ್ತೆ ಇದಾಗಿದ್ದು, ಹಿಮಾಲಯದ ಅತ್ಯಂತ ಕಠಿಣ ಭೂಪ್ರದೇಶದಲ್ಲಿ ನಿರ್ಮಾಣವಾಗಿದೆ, ರೂ.287 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣಗೊಂಡಿದೆ.
ಈ ರಸ್ತೆ ನಿರ್ಮಾಣ ಭಾರತ-ಭೂತಾನ್ನ ಸ್ನೇಹದ ಸಂಕೇತ ಎಂದು ತ್ಹೆರಿಂಗ್ ಟೊಬ್ಗೆ ಹೇಳಿದ್ದಾರೆ.
ಭೂತಾನ್ನಲ್ಲಿ ಭಾರತದ ಅನುದಾನದಲ್ಲಿ ವಿದ್ಯುತ್ ವಲಯ ಸೇರಿದಂತೆ ಹಲವಾರು ಮೂಲಸೌಕರ್ಯ ಕಾರ್ಯಗಳು ನಡೆಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.