ಮಂಡ್ಯ: ಚಾಮರಾಜನಗರ ಜಿಲ್ಲೆಯ ಮಲವಳ್ಳಿ ತಾಲೂಕನ್ನು ನಾವೆನದರು ಪ್ರವೇಶ ಮಾಡಿದರೆ ನಮ್ಮ ಕಿವಿ ಕೆಂಪೇಗೌಡ ಎಂಬ ಹೆಸರು ಬಿದ್ದೇಬೀಳುತ್ತದೆ. ಆದರೆ ಈ ಕೆಂಪೇಗೌಡ ಬೆಂಗಳೂರಿನ ನಿರ್ಮಾತೃವಲ್ಲ, ಆದರೆ ಕೆರೆಗಳ ಉದ್ಧಾರಕ.
ಮಲವಳ್ಳಿಯಲ್ಲಿ ಕೆಂಪೇಗೌಡ ಒಬ್ಬ ಲೆಜೆಂಡ್ ಎನಿಸಿದ್ದಾರೆ, ಯಾರನ್ನೂ ಕೇಳಿದರೂ ಅವರ ಪೂರ್ಣ ವಿವರವನ್ನು ನೀಡುತ್ತಾರೆ. ದಾಸರದೊಡ್ಡಿ ಸಮೀಪ ಇರುವ ನೂರಾರು ನೂರಾರು ಹಟ್ಟಿಗಳ ಪೈಕಿ ಒಂದರಲ್ಲಿ ವಾಸವಿರುವ ಇವರು, 50 ಕುರಿಗಳನ್ನು ಸಾಕುತ್ತಾ, ಗಿಡ ನೆಡುತ್ತಾ, ಪರಿಸರ ರಕ್ಷಣೆಯ ಕಾಯಕದಲ್ಲಿ ನಿರತರಾಗಿರುತ್ತಾರೆ.
ಏಕಾಂಗಿಯಾಗಿ ಕುಂಡಿನಿಬೆಟ್ಟದಲ್ಲಿ 14 ತೊರೆಗಳನ್ನು ನಿರ್ಮಿಸಿದ ಹೆಗ್ಗಳಿಕೆ ಇವರದ್ದು, ಪ್ರಶಸ್ತಿ ರೂಪದಲ್ಲಿ ಸಿಕ್ಕ ಹಣವನ್ನು ಸ್ವಂತಕ್ಕೆ ಬಳಸದೇ ಕೆರೆಗಳ ಪುನರುಜ್ಜೀವನಕ್ಕಾಗಿ ಬಳಸಿದ ಹೆಮ್ಮೆ ಇವರಿಗಿದೆ. ಅಷ್ಟೇ ಅಲ್ಲದೇ ಬೆಟ್ಟದ ಮೂಲೆ ಮೂಲೆಯಲ್ಲಿರುವ ಜನರಿಗೆ ಸಹಾಯಕವಾಗಲು ಸಣ್ಣ ರಸ್ತೆಯನ್ನು ನಿರ್ಮಿಸಿದ ಹೆಗ್ಗಳಿಕೆಯೂ ಇವರದ್ದಾಗಿದೆ.
ಬೆಟ್ಟ ಪ್ರದೇಶದಲ್ಲಿನ ತನ್ನ ಗ್ರಾಮದಲ್ಲಿ 40 ವರ್ಷಗಳ ಹಿಂದೆ ಇವರು ತೊರೆ ನಿರ್ಮಾಣ ಕಾರ್ಯ ಆರಂಭ ಮಾಡಿದರು. ಕುರಿಗಳನ್ನು ಆ ಪ್ರದೇಶಕ್ಕೆ ಮೇಯಲು ಕರೆದುಕೊಂಡು ಹೋದಾಗ ಅವುಗಳ ಬಾಯಾರಿಕೆಯನ್ನು ನೀಗಲು ಮಣ್ಣು ತೋಡಿ ಮರದ ಹಲಗೆಗಳನ್ನು ಇಟ್ಟು ಹಳ್ಳ ನಿರ್ಮಾಣ ಮಾಡಿದರು. ವನ್ಯಜೀವಿಗಳಿಗೂ ಇದರಿಂದ ಸಾಕಷ್ಟು ಪ್ರಯೋಜನವಾಗಿದೆ. ಅದೇ ಕಾರ್ಯ ಮುಂದೆ ಅವರು ಇನ್ನಷ್ಟು ತೊರೆಗಳನ್ನು ಸ್ಥಾಪಿಸಲು ಪ್ರೇರಣೆ ನೀಡಿತು.
ನಟ ಸುದೀಪ್ ಕೂಡ ಇವರಿಗೆ ಹಣಕಾಸು ನೆರವು ನೀಡಿದ್ದಾರೆ. ಆ ಹಣದಿಂದ ಅವರು ರಸ್ತೆ ನಿರ್ಮಾಣದ ಕಾರ್ಯ ಮಾಡಿದ್ದಾರೆ. ಮಾತ್ರವಲ್ಲ ತಾವು ನಿರ್ಮಿಸಿದ ಕೆರೆ ತೊರೆಗಳಿಗೆ ಒಂದು ಸರಿಯಾದ ರಚನೆ ನೀಡಿದ್ದಾರೆ. ಅದರ ಸುತ್ತಲೂ ಆಲದ ಮರಗಳನ್ನು ನೆಟ್ಟಿದ್ದಾರೆ.
82 ನೇ ವಯಸ್ಸಲ್ಲೂ ಆರೋಗ್ಯವಾಗಿರುವ ಕೆಂಪೇಗೌಡ ಈಗಲೂ ದಿನದ 12 ಗಂಟೆ ಬೆಟ್ಟದಲ್ಲೇ ಸುತ್ತಾಡುತ್ತಿರುತ್ತಾರೆ, ಪ್ರತಿ ಮರಗಳ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದಾರೆ. ದುರಾಸೆಯಿರುವ ಮನುಷ್ಯರೇ ತುಂಬಿರುವ ಈ ಕಾಲದಲ್ಲಿ ಅವರು ಮಾತ್ರ ತಮ್ಮೆಲ್ಲಾ ಗಳಿಕೆಯನ್ನು ಕೆರೆ ತೊರೆ, ಗಿಡ ಮರ, ಬೆಟ್ಟ ಗುಡ್ಡಗಳಿಗಾಗಿ ವಿನಿಯೋಗಿಸುತ್ತಿದ್ದಾರೆ, ಈ ಮೂಲಕ ಹೀರೋ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.