ಹರಿದ್ವಾರ್: ಯೋಗ ಮತ್ತು ಸೂರ್ಯ ನಮಸ್ಕಾರಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಯೋಗ ಗುರು ರಾಮ್ದೇವ್ ಬಾಬಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಸೂರ್ಯ ನಮಸ್ಕಾರಕ್ಕೂ, ಧಾರ್ಮಿಕತೆಗೂ ಏನು ಸಂಬಂಧ? ಎಂದು ಪ್ರಶ್ನಿಸಿರುವ ಬಾಬಾ, ಸೂರ್ಯ ನಮಸ್ಕಾರದೊಂದಿಗೆ ಮಂತ್ರಗಳನ್ನೂ ಕೆಲವರು ಪಠಿಸಲು ಆರಂಭಿಸಿದ ಪರಿಣಾಮವಾಗಿ ಈ ವಿವಾದ ಎದ್ದಿದೆ. ಮಂತ್ರ ಪಠಿಸುವುದು ಅವಶ್ಯಕವಲ್ಲ ಎಂದಿದ್ದಾರೆ.
ಉಸಿರಾಟಕ್ಕೂ ಧರ್ಮಕ್ಕೂ ಯಾವ ರೀತಿಯ ಸಂಬಂಧವಿದೆ? ಮುಸ್ಲಿಂರು ಮಾಡುವ ನಮಾಝ್ ಕೂಡ ವಜ್ರಾಸನದ ಭಂಗಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ರಾಜಪಥ್ನಲ್ಲಿ ರಾಮ್ದೇವ್ ಅವರ 500 ಶಿಷ್ಯರು ಯೋಗವನ್ನು ಪ್ರದರ್ಶಿಸಲಿದ್ದಾರೆ.
ಇದರಲ್ಲಿ ಎಲ್ಲಾ ಧರ್ಮದ ಮುಖಂಡರುಗಳೂ ಭಾಗವಹಿಸಬೇಕು ಎಂದು ಬಾಬಾ ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.