ನ್ಯೂಯಾರ್ಕ್: ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಬಗ್ಗೆ ಹಲವಾರು ವಾದ ವಿವಾದಗಳಿವೆ. ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿದ ಪ್ರೇಮ ಸೌಧ ಇದೆಂದು ಅಧಿಕೃತವಾಗಿ ನಂಬಲಾದರೂ, ಇದರ ಹಿಂದೆ ಬೇರೆಯದ್ದೇ ಇತಿಹಾಸ ಇದೆ ಎಂಬುದು ಹಲವರ ವಾದವಾಗಿದೆ.
ನ್ಯೂಯಾರ್ಕ್ ಪ್ರಸಿದ್ಧ ವಾಸ್ತುಶಿಲ್ಪಿ ಪ್ರೊಫೆಸರ್ ಮಾರ್ವಿನ್ ಎಚ್.ಮಿಲ್ಸ್ ಅವರು ಕೂಡ, ತಾಜ್ ಮಹಲ್ ನಿಜವಾಗಿ ಹಿಂದೂ ಸ್ಮಾರಕವಾಗಿದೆ. ಅದನ್ನು ಮೊಘಲರು ಆಕ್ರಮಿಸಿಕೊಂಡು ಬಳಿಕ ಇಸ್ಲಾಂ ಸಮಾಧಿಯಾಗಿನ್ನಾಗಿ ಪರಿವರ್ತಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ಗೆ ಬರೆದ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
‘ಕಾರ್ಬನ್-14ನ ಸೈಂಟಿಫಿಕ್ ಡೇಟಿಂಗ್ ಮತ್ತು ಥರ್ಮೊಲುಮೈನ್ಸೆನ್ಸ್ ಮೂಲಕ ತಾಜ್ನ ಮೂಲವನ್ನು ನಿರ್ಧರಿಸಬಹುದು, ಭಾರತೀಯ ಪುರಾತತ್ವ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.