ನಮ್ಮ ಹಿರಿಯರು ತಮ್ಮ ಕಾಲಾನಂತರ ತಮ್ಮಲ್ಲಿರುವ ಆಸ್ತಿಯನ್ನು ಮನೆಯವರ, ಮಕ್ಕಳ, ಬಂಧುಗಳ ಹೆಸರಿಗೆ ಬರೆದಿಡುವುದನ್ನು ಕೇಳಿದ್ದೇವೆ. ಇದೇ ರೀತಿ ಈಗ ತಮ್ಮ ಆನ್ಲೈನ್ ಆಸ್ತಿಗೂ ಉಯಿಲು ಬರೆಯುವ ಮೂಲಕ ಇತತರಿಗೆ ವರ್ಗಾಯಿಸಬಹುದು.
ಭೌತಿಕ ಆಸ್ತಿಯಂತೆ ನಮ್ಮ ಕಾಲಾನಂತರ ನಮ್ಮ ಆನ್ಲೈನ್ ಆಸ್ತಿಗಳಾದ ಇ-ಮೇಲ್, ವ್ಯಾಟ್ಸಪ್, ಬ್ಲಾಗ್, ಬ್ಯಾಂಕ್ ಖಾತೆ, ಆನ್ಲೈನ್ ವಿಡಿಯೋ, ಫೋಟೋ ಮೊದಲಾದ ಫೈಲ್ಗಳನ್ನು ಬೇರೊಬ್ಬರ ಹೆಸರಿಗೆ ನಮೂದಿಸಬಹುದು. ಇದಕ್ಕಾಗಿ ಆಯಾ ಸೇವೆಗಳ ಷರತ್ತುಗಳ ವಿಭಾಗದಲ್ಲಿ ’ಖಾತೆಯ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸುವುದಿಲ್ಲ’ ಎಂದು ನಮೂದಿಸಿರುತ್ತಾರೆ.
SECURESAFE.COM ಈ ಸೈಟ್ ನಮ್ಮ ಖಾತೆಗಳ ಐಡಿ, ಪಾಸ್ವರ್ಡ್ ಎಲ್ಲವನ್ನೂ ಸಂಗ್ರಹಿಸುತ್ತದೆ. ಇದರಲ್ಲಿ ನಮ್ಮ ಆಸ್ತಿಯ ವಾರಸುದಾರರ ಹೆಸರು ನಮೂದಿಸಬಹುದು. ಈ ತಾಣದ ಉಚಿತ ಪ್ಲಾನ್ ಮೂಲಕ ೫೦ ಪಾಸ್ವರ್ಡ್, ಒಬ್ಬ ಉತ್ತರಾಧಿಕಾರಿಯನ್ನು ನಿಯೋಜಿಸಿ ಸಂಗ್ರಹಿಸಿಡಬಹುದು. ಹೆಚ್ಚು ಪಾಸ್ವರ್ಡ್ ಹಾಗೂ ಉತ್ತರಾಧಿಕಾರಿಗಳು ಬೇಕಿದ್ದಲ್ಲಿ ಹಣ ಪಾವತಿಸಬೇಕಾಗುತ್ತದೆ.
AFTERNOTE.COM ಈ ತಾಣದಲ್ಲಿ ಮರಣೋತ್ತರವಾಗಿ ಆತ್ಮೀಯರಿಗೆ ಏನೇನು ತಿಳಿಸಬೇಕೆಂದು ಇಚ್ಛಿಸುವರೋ, ಅದನ್ನು ತಿಳಿಸಲು ಡಿಜಿಟಲ್ ವಿಲ್ ರಚಿಸಬಹುದು. ಕುಟುಂಬಿಕರಿಗೆ ಅಥವಾ ಸ್ನೇಹಿತರಿಗೆ ವೈಯಕ್ತಿಕ ಸಂದೇಶವನ್ನೂ ಕಳುಹಿಸಬಹುದು. ಮೂವರು ವಿಶ್ವಸ್ಥರ(ಟ್ರಸ್ಟಿ)ನ್ನು ನಿಯೋಜಿಸಬಹುದು. ಅವರು ಖಾತೆಯ ವಿವರಗಳನ್ನು, ಸಂದೇಶವನ್ನು ತಲುಪಿಸಬೇಕಾದಲ್ಲಿ ತಲುಪಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.