ನವದೆಹಲಿ: ಪ್ರಯಾಣಿಕರೊಬ್ಬರ ಸಮಯಪ್ರಜ್ಞೆಯಿಂದಾಗಿ ರೈಲಿನಲ್ಲಿ ಕಳ್ಳಸಾಗಾಣೆಯಾಗುತ್ತಿದ್ದ 25 ಅಪ್ರಾಪ್ತ ಹೆಣ್ಣು ಮಕ್ಕಳು ರಕ್ಷಿಸಲ್ಪಟ್ಟಿದ್ದಾರೆ. ಮುಜಫರ್ಪುರ-ಬಾಂದ್ರಾ ಅವಧ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.
ಜುಲೈ 5ರಂದು ರೈಲಿನ ಎಸ್5 ಕೋಚ್ನಲ್ಲಿ ಸುಮಾರು 25 ಹೆಣ್ಣುಮಕ್ಕಳು ವಿಚಲಿತರಾಗಿ, ದುಃಖದಿಂದ ಇರುವುದನ್ನು ಕಂಡ ಪ್ರಯಾಣಿಕರೊಬ್ಬರು ತಕ್ಷಣವೇ ರೈಲ್ವೇ ಸಚಿವಾಲಯಕ್ಕೆ ಟ್ವಿಟ್ ಮಾಡಿ ಮಾಹಿತಿ ನೀಡಿದ್ದಾರೆ. ಸಚಿವಾಲಯವು ವಾರಣಾಸಿ ರೈಲು ಅಧಿಕಾರಿಗಳಿಗೆ, ಚೈಲ್ಡ್ಲೈನ್ಗೆ ಮಾಹಿತಿ ನೀಡಿದೆ. ತಕ್ಷಣವೇ ಇವರು ಜಿಆರ್ಪಿ ಮತ್ತು ಆರ್ಪಿಎಫ್ಗೆ ಸುದ್ದಿ ಮುಟ್ಟಿಸಿ ಮಕ್ಕಳ ಬಗ್ಗೆ ವಿಚಾರಿಸುವಂತೆ ತಿಳಿಸಿದ್ದಾರೆ.
ಕಾರ್ಯಪ್ರವೃತ್ತರಾದ ಆರ್ಪಿಎಫ್ ಜವಾನರು ಕಳ್ಳಸಾಗಾಣೆ ವಿರೋಧಿ ತಂಡದೊಂದಿಗೆ ಕಪ್ತಾನ್ಗಂಜ್ನಲ್ಲಿ ರೈಲನ್ನು ಹತ್ತಿ ಮಕ್ಕಳನ್ನು ಕಾಪಾಡಿದ್ದಾರೆ. ಇವರೊಂದಿಗೆ ಇದ್ದ 55 ವರ್ಷದ ಮತ್ತು 25 ವರ್ಷದ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಿದ್ದಾರೆ.
ಈ ಹೆಣ್ಣು ಮಕ್ಕಳ ವಯಸ್ಸು 10-14 ವರ್ಷ ಎನ್ನಲಾಗಿದ್ದು, ಯಾವುದೇ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಇವರು ಪೊಲೀಸರಿಗೆ ನೀಡಿಲ್ಲ. ಇವರ ಪೋಷಕರನ್ನು ಕರೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.