ನವದೆಹಲಿ : ಭಾರತ ಶೇ. 20 ರಷ್ಟು ನಕ್ಸಲ್ ಹಿಂಸಾಚಾರದಿಂದ ಮುಕ್ತವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2013 ಕ್ಕೆ ಹೋಲಿಸಿದರೆ 2017 ರಲ್ಲಿ ನಕ್ಸಲ್ ಸಂಬಂಧಿ ಸಾವುಗಳ ಸಂಖ್ಯೆ ಶೇ. 34 ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ನಕ್ಸಲರ ವಿಸ್ತರಣೆ ಮತ್ತು ಪ್ರಭಾವ ಕುಗ್ಗುತ್ತಾ ಸಾಗಿದೆ. ನಾವು ಹಿಂಸಾಚಾರದ ಬಗ್ಗೆ ಶೂನ್ಯ ತಾಳ್ಮೆಯನ್ನು ವಹಿಸಿದ್ದೇವೆ.
ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಸಾಮಾಜಿಕ ಸಬಲೀಕರಣದಿಂದಾಗಿ ಆ ಪ್ರದೇಶದ ಬಡವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತಿವೆ ಎಂದಿದ್ದಾರೆ.
74 ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಸುಮಾರು 45,000 ಕಿ.ಮೀ. ರಸ್ತೆ ನಿರ್ಮಾಣವಾಗಿದೆ. 400 ಮೊಬೈಲ್ ಟವರ್ಗಳ ಸ್ಥಾಪನೆಯಾಗಿದೆ. 22 ಟವರ್ಗಳ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ.
ಕೆಂಪು ಉಗ್ರರ ಭೌಗೋಳಿಕ ವಿಸ್ತರಣೆಗಳು ಕುಗ್ಗುತ್ತಾ ಸಾಗಿದೆ. ಈಗ 126 ನಕ್ಸಲ್ ಪೀಡಿತ ಪ್ರದೇಶಗಳ ಪೈಕಿ 44 ನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಭಾಗಗಳಲ್ಲಿ ನಾವು ಕೇಂದ್ರೀಯ ವಿದ್ಯಾಲಯ ಮತ್ತು ಜವಾಹರ್ ನವೋದಯ ಶಾಲೆಗಳನ್ನು ನಾವು ಸ್ಥಾಪಿಸುತ್ತಿದ್ದೇವೆ. ಇದರಿಂದಾಗಿ ನಕ್ಸಲರ ಪ್ರಭಾವಗಳು ಕುಗ್ಗುತ್ತಾ ಸಾಗಿದೆ. ಭದ್ರತಾ ಪಡೆಗಳು ಕೆಂಪು ಉಗ್ರರನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.