ಹೈದರಾಬಾದ್: ಹಸಿದ ಹೊಟ್ಟೆಗಳನ್ನು ತಣಿಸುವುದಕ್ಕಿಂತ ಮಹತ್ವದ ಕಾರ್ಯ ಬೇರೆ ಯಾವುದೂ ಇಲ್ಲ. ಹೊಟ್ಟೆ ತಂಪಾಗಿದ್ದರೆ ಮಾತ್ರ ಇತರ ಕಾರ್ಯಗಳತ್ತ ನಾವು ಗಮನ ಕೊಡಲು ಸಾಧ್ಯ. ಆದರೆ ಇಂದಿಗೂ ನಮ್ಮ ದೇಶದಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವವರು ಅನೇಕರಿದ್ದಾರೆ. ಅನಾರೋಗ್ಯ, ನಿರುದ್ಯೋಗ ಸಮಸ್ಯೆಯಿಂದಾಗಿ ಹಲವೆಡೆ ಹಸಿವು ಇನ್ನೂ ಜೀವಂತವಾಗಿದೆ.
ಹಸಿದ ಹೊಟ್ಟೆಗಳನ್ನು ತಣಿಸುವುದಕ್ಕೆಂದೇ ಹೈದರಾಬಾದ್ನಲ್ಲಿನ ವ್ಯಕ್ತಿಯೊಬ್ಬರು ಜೀವನ ಮುಡಿಪಾಗಿಟ್ಟಿದ್ದಾರೆ. ಪ್ರತಿನಿತ್ಯ ತಮ್ಮ ತಂಡದೊಂದಿಗೆ ಬಡವರಿಗೆ ಆಹಾರವನ್ನು ವಿತರಿಸುವ ಕಾರ್ಯ ಮಾಡುತ್ತಾರೆ.
ಹೈದರ್ ಮೂಸ್ವಿ ಎಂಬುವವರು ಕಳೆದ ಮೂರು ವರ್ಷಗಳಿಂದ ನೂರಾರು ಪ್ಯಾಕೇಟ್ ಆಹಾರದ ಪೊಟ್ಟಣಗಳನ್ನು ನಿತ್ಯ ವಸತಿ ಹೀನರಿಗೆ, ಬಡವರಿಗೆ ಹಂಚುತ್ತಾರೆ.
ದಬೀರ್ಪುರ ಬ್ರಿಡ್ಜ್ ಕೆಳಗಡೆ ಇವರು ಆಹಾರ ಹಂಚಿಕೆ ಮಾಡುತ್ತಾರೆ, ಈ ಆಹಾರವನ್ನು ಪಡೆಯಲೆಂದೇ ಬೇರೆ ಬೇರೆ ಜಾಗಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಮೂಸ್ವಿ ನೀಡುವ ಆಹಾರ ತಿಂದು ಅವರಿಗೆ ಮನಸಾರೆ ಹರಸುತ್ತಾರೆ.
ಅಷ್ಟೇನು ಸಿರಿವಂತರಲ್ಲದಿದ್ದರೂ ಸ್ನೇಹಿತರ, ಹಿತೈಷಿಗಳ ಸಹಕಾರದೊಂದಿಗೆ ಮೂಸ್ವಿ ಈ ಕಾರ್ಯವನ್ನು ಮುಂದುವರೆಸಿದ್ದಾರೆ. ಇದಕ್ಕೆ ಮಾಸಿಕ ರೂ.1ಲಕ್ಷಕ್ಕೂ ಅಧಿಕ ಖರ್ಚು ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.