ಲಕ್ನೋ: ಸಮಾಜದ ಧರ್ಮದಲ್ಲಿ ಮುಸ್ಲಿಂ ಆದರೂ ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ ಲಕ್ನೋದ ಉದ್ಯಮಿ ರಶೀದ್ ನಸೀಮ್.
ಉತ್ತರ ಪ್ರದೇಶ ಮತ್ತು ಬಿಹಾರದ ವಿವಿಧ ಕಡೆ ಸುಮಾರು 51 ದೇಗುಲಗಳ ನಿರ್ಮಾಣಕ್ಕೆ ಬೇಕಾದ ಭೂಮಿ ಮತ್ತು ಹಣವನ್ನು ಇವರು ಒದಗಿಸಿಕೊಟ್ಟಿದ್ದಾರೆ
ನಸೀಮ್ ಅವರು ಶೈನ್ ಗ್ರೂಪ್ ಆಫ್ ಕಂಪನೀಸ್ನ ನಿರ್ದೆಶಕರಾಗಿದ್ದು, ಸಮಾಜದಲ್ಲಿ ಭಾತೃತ್ವ ಮತ್ತು ಸೌಹಾರ್ದತೆಯ ನಂಬಿಕೆಗಳನ್ನು ಗಟ್ಟಿಗೊಳಿಸುವ ಸಲುವಾಗಿ ದೇಗುಲ ನಿರ್ಮಾಣಕ್ಕೆ ಕೈಜೋಡಿಸಲು ನಿರ್ಧರಿಸಿದ್ದಾರೆ.
‘ಮುಸ್ಲಿಮರು ನನ್ನನ್ನು ಎಂದೂ ಧಾರ್ಮಿಕ ಕಾರ್ಯಗಳನ್ನು ಮಾಡದಂತೆ ತಡೆದಿಲ್ಲ. ಭಾತೃತ್ವದ ಸಂದೇಶ ಸಾರಲು ಈ ಕಾರ್ಯ ಮಾಡುತ್ತಿದ್ದೇನೆ. ಈ ಭಾಗದ ‘ಗಂಗಾ-ಜಮುನಿ’ ಸಂಸ್ಕೃತಿಯನ್ನು ಜೋಪಾನವಾಗಿಡುವ ಪ್ರಯತ್ನ ನನ್ನದು’ ಎಂದು ನಸೀಮ್ ಹೇಳುತ್ತಾರೆ.
‘ಅಲಹಾಬಾದ್-ವಾರಣಾಸಿ ಹೈವೇ ಸಮೀಪ ನಾವು ನಿರ್ಮಿಸುತ್ತಿರುವ ದೇಗುಲದ ಕಾಮಗಾರಿ ಮುಕ್ತಾಯವಾಗುತ್ತಾ ಬಂದಿದ್ದು, ಹಿಂದೂಗಳ ಪವಿತ್ರ ಶ್ರಾವಣ ಮಾಸದಲ್ಲಿ ಇದರ ಉದ್ಘಾಟನೆಯಾಗಲಿದೆ. ಬೇರೆ 21 ದೇವಸ್ಥಾನಗಳ ಕಾಮಗಾರಿ 1 ವರ್ಷದಲ್ಲಿ ಪೂರ್ಣವಾಗಲಿದೆ. 2019ರ ಅಂತ್ಯದಲ್ಲಿ ಎಲ್ಲಾ 51 ದೇವಸ್ಥಾನಗಳು ಭಕ್ತರಿಗಾಗಿ ತೆರೆದುಕೊಳ್ಳಲಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.