News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಅಪೇರೆಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್ ಪದವಿ ಕೋರ್ಸ್‍ಗೆ ಅರ್ಜಿ ಆಹ್ವಾನ

ಉಡುಪು ಹಾಗೂ ಫ್ಯಾಷನ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಗ್ರಾಮೀಣ ಪ್ರತಿಭೆಗಳಿಗೆ ಅಪೂರ್ವ ಅವಕಾಶ

ಬೆಂಗಳೂರು : ಯಶವಂತಪುರದಲ್ಲಿರುವ ಅಪೇರೆಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್‍ನಲ್ಲಿ ಅಪೇರೆಲ್ ಹಾಗೂ ಡಿಸೈನ್ ಮತ್ತು ರೀಟೇಲ್ ಪದವಿ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯೂಸಿ ಅಥವಾ 10+2ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಉಡುಪು, ಫ್ಯಾಷನ್‍ಪ್ರಿಯತೆ ಜನರಲ್ಲಿ ಹೆಚ್ಚಾಗುತ್ತಿದೆ. ಅಂತೆಯೇ ಉಡುಪು ಕ್ಷೇತ್ರದಲ್ಲಿ ಉದ್ಯೋಗ ಅರಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವೃತ್ತಿಗೆ ಅಗತ್ಯವಾದ ತರಬೇತಿಯೊಂದಿಗೆ ಪದವಿ ಪಡೆಯಲು `ಅಪೇರೆಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್(ಎಟಿಡಿಸಿ)’ ಉತ್ತಮ ತಾಣವಾಗಿದೆ.

ಅಪೇರೆಲ್ ಕ್ಷೇತ್ರದಲ್ಲಿ ಸ್ವ-ಉದ್ಯೋಗ ಹಾಗೂ ಸ್ವಂತ ಉದ್ಯಮ ಸ್ಥಾಪಿಸುವ ಹಂಬಲವುಳ್ಳವರಿಗೆ ಎರಡು ಪದವಿ ಕೋರ್ಸ್‍ಗಳಿಗೆ ಪ್ರವೇಶ ಈಗ ಮುಕ್ತವಾಗಿದೆ.

ಅಪೇರೆಲ್‍ನಲ್ಲಿ ನೀಡಲಾಗುವ ಪದವಿಯು ಉತ್ಪಾದನೆ ಮತ್ತು ಉದ್ಯಮಶೀಲತೆಯ ಶಿಕ್ಷಣ ನೀಡುತ್ತದೆ. ಈ ಪದವಿಯು ಉಡುಪು ಉತ್ಪಾದನೆ ಹಾಗೂ ಫ್ಯಾಷನ್ ಕ್ಷೇತ್ರದಲ್ಲಿ ಪ್ರೊಡಕ್ಷನ್ ಎಕ್ಸಿಕ್ಯೂಟಿವ್,ಪ್ರೊಡಕ್ಷನ್ ಮ್ಯಾನೇಜರ್, ಇಂಡಸ್ಟ್ರಿಯಲ್ ಎಂಜಿನಿಯರ್, ಮರ್ಕೆಂಡೈಸರ್ ಗಳು, ಅಸಿಸ್ಟೆಂಟ್ ಮರ್ಕೆಂಡೈಸರ್ ಗಳು, ಕ್ಯೂಎ ಮ್ಯಾನೇಜರ್ ಉದ್ಯೋಗ ಪಡೆಯಲು ನೆರವಾಗುತ್ತದೆ.

ಫ್ಯಾಷನ್ ಕ್ಷೇತ್ರದಲ್ಲಿ ನೀಡಲಾಗುವ ಪದವಿ ಕೋರ್ಸ್ ಡಿಸೈನ್ ಮತ್ತು ರೀಟೇಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಈ ಪದವಿಯ ನಂತರ ಅಪೇರೆಲ್ ಮತ್ತು ರೀಟೇಲ್ ಕ್ಷೇತ್ರದಲ್ಲಿ ಮರ್ಕೆಂಡೈಸರ್‍ಗಳು, ಫ್ಯಾಷನ್ ಡಿಸೈನರ್, ಸ್ಯಾಂಪ್ಲಿಂಗ್ ಮ್ಯಾನೇಜರ್, ಡಿಸೈನ್ ಕೋಆರ್ಡಿನೇಟರ್ಸ್, ರೀಟೇಲ್ ಮ್ಯಾನೇಜರ್ಸ್, ಅಸಿಸ್ಟೆಂಟ್ ಮರ್ಕೆಂಡೈಸರ್ಸ್, ಫ್ಯಾಷನ್ ಕೋಆರ್ಡಿನೇಟರ್ಸ್ ಉದ್ಯೋಗ ಪಡೆಯಬಹುದು.

ವಿದ್ಯಾರ್ಥಿಗಳಿಗೆ ಫ್ಯಾಶನ್‍ನ ವಿಶ್ಲೇಷಣೆ ಮಾಡುವ, ಪರಿಕಲ್ಪನೆಯನ್ನು ಸಾಕಾರಗೊಳಿಸುವ, ವಿನ್ಯಾಸ ಅಭ್ಯಾಸ ಮಾಡುವ, ಟೆಕ್ಸ್‍ಟೈಲ್, ಫ್ಯಾಶನ್ ಇತಿಹಾಸ, ಬಟ್ಟೆಯನ್ನು ಸಿದ್ಧಪಡಿಸುವ ಕುರಿತು ಮೂಲಭೂತ ಅಂಶಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಎಟಿಡಿಸಿ ಭಾರತ ಸರ್ಕಾರದ ಜವಳಿ ಇಲಾಖೆಯಿಂದ ನೋಂದಾಯಿಸಲ್ಪಟ್ಟ ಸಂಸ್ಥೆಯಾಗಿದೆ. ಉತ್ತರ ಕರ್ನಾಟಕ, ರಾಮನಗರ, ದೊಡ್ಡಬಳ್ಳಾಪುರ, ಚನ್ನಪಟ್ಟಣ, ಕನಕಪುರ, ನೆಲಮಂಗಲ ಸೇರಿದಂತೆ ಗ್ರಾಮೀಣ ಪ್ರದೇಶದ ಹಾಗೂ ಫ್ಯಾಶನ್ ವಿಭಾಗದಲ್ಲಿ ವೃತ್ತಿ ಪಡೆಯುವ ಹಂಬಲ ಹೊಂದಿರುವ ವಿದ್ಯಾರ್ಥಿಗಳು ಈ ಕೋರ್ಸ್‍ಗೆ ಸೇರಬಹುದು. ಎಟಿಡಿಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರವು ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಸಹ ಕಲ್ಪಿಸಿದೆ.

ಫ್ಯಾಷನ್ ಹಾಗೂ ಅಪೇರೆಲ್ ಕ್ಷೇತ್ರದ ಮೂಲಭೂತ ಅಂಶಗಳನ್ನು ಮತ್ತು ಅಗತ್ಯವಾದ ಸಾಧನಗಳ ಪರಿಚಯವನ್ನು ಮಾಡಿಕೊಡಲಾಗುತ್ತದೆ. ಪ್ರಾಯೋಗಿಕ ಉದ್ಯಮಪ್ರೇರಿತ ತರಬೇತಿಗೆ ಮಹತ್ವ ನೀಡಲಾಗುತ್ತದೆ. ತಾಂತ್ರಿಕ, ಸಂಶೋಧನೆ, ಸೃಜನಶೀಲತೆ ಹಾಗೂ ಮಾರುಕಟ್ಟೆ ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತದೆ. ಇಷ್ಟೇ ಅಲ್ಲದ ಬಟ್ಟೆಯ ವಿಶ್ಲೇಷಣೆ, ಉತ್ಪಾದನೆ, ಅವುಗಳ ಗುಣಮಟ್ಟ ಹೆಚ್ಚಿಸಲು ಸಂಶೋಧನೆಗೆ ಕೂಡ ಒತ್ತು ನೀಡಲಾಗುತ್ತದೆ.

ಎಟಿಡಿಸಿ ಸಂಸ್ಥೆಯಲ್ಲಿ ಅಂತಿಮ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್ ನೀಡಲಾಗಿದ್ದು ಪ್ರಾಥಮಿಕವಾಗಿ ತಿಂಗಳಿಗೆ 20 ಸಾವಿರ ರೂ. ವೇತನಕ್ಕೆ ಉದ್ಯಮಗಳಿಂದ ಅವಕಾಶ ಪಡೆದಿದ್ದಾರೆ. ಅಲ್ಲದೇ ಪದವಿ ಮುಗಿದ ನಂತರ ಸ್ವತಃ ಟೆಕ್ಸ್ ಟೈಲ್ಸ್ ಉದ್ಯಮ ಆರಂಭಿಸಲು ಬ್ಯಾಂಕ್‍ಗಳಿಂದ 50 ಲಕ್ಷ ರೂಗಳ ವರೆಗೆ ಸಾಲದ ಸೌಲಭ್ಯ ಕೂಡ ಲಭಿಸಲಿದೆ.

ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಮಾಡುವ ಸಲುವಾಗಿ ಭಾರತ ಸರ್ಕಾರ ಈ ಎಟಿಡಿಸಿ ಸಂಸ್ಥೆ ಆರಂಭಿಸಿದ್ದು, ಯಶವಂತಪುರದಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಅಪೆರಲ್ ಮತ್ತು ಫ್ಯಾಶನ್ ಪದವಿ ಸೇರ್ಪಡೆಗೆ ಪ್ರವೇಶ ಆರಂಭವಾಗಿದ್ದು, ಕೇವಲ 25 ಸೀಟುಗಳು ಮಾತ್ರ ಖಾಲಿ ಇದ್ದು, ಅರ್ಜಿ ಸಲ್ಲಿಸಲು ಜುಲೈ 15 ರಂದು ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 080-41283829, +919916807401 ಇಮೇಲ್- bangalore@atdcindia.co.in ಅಥವಾ ವೆಬ್ ಸೈಟ್ – www.atdcindia.co.in ಗೆ ಸಂಪರ್ಕಿಸಿ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top