ಖರಗ್ಪುರ: ಭಾರತದ ನವ ಪೀಳಿಗೆ ಹೊಸ ಹೊಸ ಆವಿಷ್ಕಾರಗಳ ಮೂಲಕ ಭಾರತವನ್ನು ತಂತ್ರಜ್ಞಾನ ಸ್ನೇಹಿಯನ್ನಾಗಿ ರೂಪಿಸುತ್ತಿವೆ. ಐಐಟಿ ಖರಗ್ಪುರದ ವಿಜ್ಞಾನಿಗಳ ತಂಡವೊಂದು ಮೊಟ್ಟೆಯ ಹೊರ ಪದರದಿಂದ ವಿದ್ಯುತ್ ಉತ್ಪಾದನೆ ಮಾಡುವ ಕುತೂಹಲಕಾರಿ ಆವಿಷ್ಕಾರವನ್ನು ಮಾಡಿದೆ.
ಎಗ್ಶೆಲ್ ಪ್ರೊಟಿನ್ಗಳನ್ನು ಬಳಸಿ ದೇಹದ ಚಲನವಲನದಿಂದ ವಿದ್ಯುತ್ ತಯಾರಿಸುವ ಸಣ್ಣ ಡಿವೈಸ್ಗಳನ್ನು ಈ ವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದೆ. ಇದು ಭವಿಷ್ಯದಲ್ಲಿ ಧರಿಸಬಹುದಾದ ಸೆನ್ಸಾರ್ ಮತ್ತು ಡಿವೈಸ್ಗಳಿಗೆ ವಿದ್ಯುತ್ ಒದಗಿಸಬಲ್ಲದು.
ಸಂಶೋಧಕರ ಪ್ರಕಾರ, ಮೊಟ್ಟಿಯ ಚಿಪ್ಪಿನ ಪ್ರೊಟೀನ್ಗಳಲ್ಲಿ ಪಿಝೋಎಲೆಕ್ಟ್ರಿಕ್ ಗುಣಗಳಿವೆ, ಇವುಗಳು ಯಂತ್ರಗಳ ಒತ್ತಡದಿಂದ ವಿದ್ಯುತ್ ಉತ್ಪಾದನೆ ಮಾಡಬಲ್ಲವು. ಈ ನಿಟ್ಟಿನಲ್ಲಿ ಸಂಶೋಧನೆ ಆರಂಭಿಸಿದ ಐಐಟಿ ಖರಗ್ಪುರದ ತಂಡ ವೇರೇಬಲ್ ಗ್ಯಾಜೆಟ್ಗಳಿಗೆ ವಿದ್ಯುತ್ ಪೂರೈಸಬಲ್ಲ ತಂತ್ರಜ್ಞಾನವನ್ನು ಕಂಡು ಹಿಡಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.