ಬೆಂಗಳೂರು: ವಾಟ್ಸಾಪ್ ಜನರ ನೆಚ್ಚಿನ ಸಾಮಾಜಿಕ ಜಾಲತಾಣಗಳಲ್ಲೊಂದು. ಸ್ನೇಹಿತರ, ಸಹೋದ್ಯೋಗಿಗಳ, ಕುಟುಂಬಸ್ಥರ ಪ್ರತ್ಯೇಕ ಗ್ರೂಪ್ ಮಾಡಿಕೊಂಡು ನಾವು ಇಲ್ಲಿ ಚರ್ಚೆ ಸಂವಾದಗಳನ್ನು ನಡೆಸಬಹುದಾಗಿದೆ. ಗ್ರೂಪ್ನ ಸದಸ್ಯರಾದ ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಹಕ್ಕು ಇಲ್ಲಿದೆ. ಆದರೆ ಇದೀಗ ವಾಟ್ಸಾಪ್ ಅಡ್ಮಿನ್ಗೆ ಸದಸ್ಯರ ಸಂದೇಶ ಹಾಕುವ ಹಕ್ಕನ್ನು ನಿರ್ಬಂಧಿಸುವ ಅಧಿಕಾರ ಸಿಕ್ಕಿದೆ.
ಸದಸ್ಯರಿಗೆ ಒಂದು ನಿರ್ದಿಷ್ಟ ಗ್ರೂಪ್ಗೆ ಸಂದೇಶ ಹಾಕುವ ಹಕ್ಕನ್ನು ನೀಡಬೇಕೆ ಅಥವಾ ನೀಡಬಾರದೇ ಎಂದು ನಿರ್ಧರಿಸುವ ಹಕ್ಕನ್ನು ವಾಟ್ಸಾಪ್ ಅಡ್ಮಿನ್ಗಳಿಗೆ ದಯಪಾಲಿಸಿದೆ. ಆದರೆ ಒಬ್ಬ ಸದಸ್ಯನನ್ನು ಸಂದೇಶ ಹಾಕದಂತೆ ಮಾಡಲು ಸಾಧ್ಯವಿಲ್ಲ, ಎಲ್ಲಾ ಸದಸ್ಯರ ಸಂದೇಶ ಹಾಕುವ ಹಕ್ಕನ್ನು ಕಸಿದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಎಲ್ಲರನ್ನೂ ಅಡ್ಮಿನ್ಗಳನ್ನಾಗಿಸಿ ಒಬ್ಬನನ್ನು ಮಾತ್ರ ಸದಸ್ಯನನ್ನಾಗಿಸಿದ ಪಕ್ಷದಲ್ಲಿ ಮಾತ್ರ ಒಬ್ಬ ಸದಸ್ಯನ ಹಕ್ಕನ್ನು ಕಸಿದುಕೊಳ್ಳಬಹುದಾಗಿದೆ.
ಗ್ರೂಪ್ನ ಸೆಟ್ಟಿಂಗ್ಸ್ನಲ್ಲಿ ‘ಗ್ರೂಪ್ ಸೆಟ್ಟಿಂಗ್’ ಎಂಬ ಆಯ್ಕೆಯನ್ನು ನೀಡಲಾಗಿದ್ದು, ಇದನ್ನು ಕ್ಲಿಕ್ ಮಾಡಿದಾಗ ‘ಆಲ್ ಪಾರ್ಟಿಸಿಪೆಂಟ್ಸ್’ ಅಥವಾ ‘ಓನ್ಲಿ ಅಡ್ಮಿನ್ಸ್’ ಎಂಬ ಎರಡು ಆಯ್ಕೆ ಬರುತ್ತದೆ. ಓನ್ಲಿ ಅಡ್ಮಿನ್ಸ್ನಲ್ಲಿ ಸದಸ್ಯರುಗಳಿಗೆ ಸಂದೇಶ ರವಾಣಿಸುವ ಹಕ್ಕು ಇರುವುದಿಲ್ಲ. ಅಡ್ಮಿನ್ಗಳು ಏನು ಹಾಕುತ್ತಾರೋ ಅದನ್ನು ವೀಕ್ಷಿಸಬಹುದಷ್ಟೇ. ಗ್ರೂಪ್ನ ಸೃಷ್ಟಿಕರ್ತರನ್ನು ಇತರ ಅಡ್ಮಿನ್ಗಳಿಗೆ ತೆಗೆದು ಹಾಕಲೂ ಬರುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.