ಕಾನ್ಪುರ: ಹಿಂದೂಗಳ ಪವಿತ್ರ ಮಹಾಕಾವ್ಯ ರಾಮಾಯಣವನ್ನು ಮುಸ್ಲಿಂ ಮಹಿಳೆಯೊಬ್ಬಳು ಉರ್ದುವಿನಲ್ಲಿ ಬರೆಯುವ ಮೂಲಕ ಸೌಹಾರ್ದತೆ, ಧಾರ್ಮಿಕ ಸಹಿಷ್ಣುತೆಯ ಸಂದೇಶವನ್ನು ದೇಶಕ್ಕೆ ನೀಡಿದ್ದಾಳೆ.
ಉತ್ತರಪ್ರದೇಶ ಕಾನ್ಪುರದ ಡಾ.ಮಾಹಿ ತಲತ್ ಸಿದ್ಧಿಕಿ ಅವರು, ರಾಮಾಯಣದ ಉತ್ತಮ ಸಂದೇಶಗಳನ್ನು ಮುಸ್ಲಿಂ ಸಮಾಜಕ್ಕೆ ತಿಳಿಸಿಕೊಡುವ ಸಲುವಾಗಿಯೇ ಉರ್ದುವಿನಲ್ಲಿ ಬರೆದಿದ್ದಾರೆ.
ಎರಡು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಮಾಹಿ ಅವರಿಗೆ ರಾಮಾಯಣದ ಪುಸ್ತಕವನ್ನು ನೀಡಿದ್ದರು. ಅದನ್ನು ಓದಿದ ಬಳಿಕ ಇವರು ಉರ್ದುವಿನಲ್ಲಿ ಭಾಷಾಂತರಕ್ಕೆ ಮುಂದಾದರು.
‘ಎಲ್ಲಾ ಧಾರ್ಮಿಕ ಗ್ರಂಥಗಳಲ್ಲಿ ಇರುವ ಶಾಂತಿ, ಸಹೋದರತೆಯ ಸಂದೇಶ ರಾಮಾಯಣದಲ್ಲೂ ಇದೆ, ತುಂಬಾ ಸೊಗಸಾದ ಮಹಾಕಾವ್ಯ ಅದು, ಹೀಗಾಗಿ ಅತ್ಯಂತ ಉಲ್ಲಾಸಿತಳಾಗಿ ಅದನ್ನು ಉರ್ದುವಿನಲ್ಲಿ ಬರೆದೆ’ ಎಂದು ಮಾಹಿ ಹೇಳುತ್ತಾರೆ.
ಒಂದೂವರೆ ವರ್ಷ ಅವಧಿ ತೆಗೆದುಕೊಂಡು ಅವರು ರಾಮಾಯಣವನ್ನು ಉರ್ದುವಿಗೆ ಭಾಷಾಂತರ ಮಾಡಿದ್ದಾರೆ. ಮೂಲ ಅರ್ಥಗಳು ಬದಲಾಗದಂತೆ ಎಚ್ಚರಿಕೆ ವಹಿಸಿ ಭಾಷಾಂತರಿಸಿದ್ದಾರೆ.
ಮಾಹಿ ಅವರು ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.