ಡಬ್ಲಿನ್: ಐರ್ಲೆಂಡ್ನ್ನು 143 ರನ್ಗಳ ಮೂಲಕ ಮಣಿಸಿ ಭಾರತ ಸರಣಿ ಜಯವನ್ನು ತನ್ನದಾಗಿಸಿಕೊಂಡಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಸುರೇಶ್ ರೈನಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಐರ್ಲೆಂಡ್ನ ಮಲಹಿದೆ ಗ್ರೌಂಡ್ನಲ್ಲಿ ಶುಕ್ರವಾರ ನಡೆದ ಟಿ-20 ಪಂದ್ಯದಲ್ಲಿ ಭಾರತ 20 ಓವರ್ಗಳಿಗೆ 4 ವಿಕೆಟ್ ಕಳೆದುಕೊಂಡು 213 ರನ್ಗಳನ್ನು ಗಳಿಸಿತ್ತು, ಇದನ್ನು ಬೆನ್ನತ್ತಿದ ಐರ್ಲೆಂಡ್ ಕೇವಲ 70 ರನ್ಗಳಿಗೆ ಸರ್ವಪತನಗೊಂಡಿದೆ.
ಕೆಎಲ್ ರಾಹುಲ್ ಅವರು 36 ಎಸೆತಗಳಲ್ಲಿ 70 ರನ್ಗಳನ್ನು ಬಾರಿಸಿದರು, ರೈನಾ 45 ಎಸೆತಗಳಲ್ಲಿ 69 ರನ್ಗಳನ್ನು ಬಾರಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಬುಧವಾರ ನಡೆದಿದ್ದ ಮೊದಲ ಪಂದ್ಯದಲ್ಲೂ ಐರ್ಲೆಂಡ್ನ್ನು ಭಾರತ 76 ರನ್ಗಳ ಮೂಲಕ ಸೋಲಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.