ಬೆಂಗಳೂರು: ಬಯೋಕಾನ್ ಲಿಮಿಟೆಡ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಶಾ ಅವರು, ಮಸಚ್ಯುಸೆಟ್ಸ್ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯ ಬೋರ್ಡ್ ಸದಸ್ಯೆಯಾಗಿ ನೇಮಕವಾಗಿದ್ದಾರೆ.
ಶಾ ಅವರು ಎಂಐಟಿ ಬೋರ್ಡ್ನ 8 ಸದಸ್ಯರುಗಳಲ್ಲಿ ಒಬ್ಬರಾಗಿದ್ದು, ಐದು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಜುಲೈ 1ರಿಂದ ಇವರ ಅಧಿಕಾರವಧಿ ಆರಂಭಗೊಳ್ಳಲಿದೆ.
65 ವರ್ಷದ ಶಾ ಭಾರತೀಯ ಬಯೋಟೆಕ್ ವಲಯದ ದಿಗ್ಗಜೆಯಾಗಿದ್ದು, ಬಯೋಕಾನ್ ಲಿಮಿಟೆಡ್ನ ಸ್ಥಾಪಕ ಮುಖ್ಯಸ್ಥೆಯಾಗಿದ್ದಾರೆ. ಕೈಗೆಟುಕುವ ದರದಲ್ಲಿ ಜಾಗತಿಕ ಔಷಧ ತಯಾರಿಕ ಸಂಸ್ಥೆ ಇದಾಗಿದೆ.
‘ಮೆಡಿಕಲ್ ಮೇಕರ್ ಪವರ್ ಲಿಸ್ಟ್ 2018’ನಲ್ಲಿ ಇವರು ನಂಬರ್ 1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಮುಖ ಸಂಶೋಧನಾ ವಿಶ್ವವಿದ್ಯಾಲಯವಾದ ಎಂಐಟಿಯ ಮಂಡಳಿ ಸದಸ್ಯೆಯಾಗಿರುವುದಕ್ಕೆ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.