ಹೈದರಾಬಾದ್: ಎಲ್ಲೆಂದರಲ್ಲಿ ಬೀಳುವ ಪ್ಲಾಸ್ಟಿಕ್ ಕಸವನ್ನು ತೆಗೆದು ಸ್ವಚ್ಛ ಮಾಡುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಪಾರ ಪ್ರಮಾಣದಲ್ಲಿ ಬಳಸಲ್ಪಡುವ ನೀರಿನ ಬಾಟಲ್ಗಳು, ಕೂಲ್ ಡ್ರಿಂಕ್ಸ್ ಬಾಟಲ್ಗಳನ್ನು ಹೇಗೆ ನಿರ್ವಹಣೆ ಮಾಡುವುದು ಎಂಬ ತಲೆ ನೋವು ಎಲ್ಲಾ ಕಡೆಯೂ ಇದ್ದದ್ದೇ. ಆದರೆ ರೈಲ್ವೇ ಮಾತ್ರ ತುಂಬಾ ಸ್ಮಾರ್ಟ್ ಆಗಿ ಯೋಚಿಸಿ ರೈಲು ನಿಲ್ದಾಣಗಳಲ್ಲಿ ಬಾಟಲ್ ಕ್ರಶರ್ಗಳನ್ನು ಅಳವಡಿಸಿದೆ.
ಪರಿಸರವನ್ನು ಸುಂದರವಾಗಿಡುವ ಸಲುವಾಗಿ ದಕ್ಷಿಣ ಮಧ್ಯ ರೈಲ್ವೇಯು ತನ್ನ ಸ್ಟೇಶನ್ಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶರ್ ಮತ್ತು ರಿಸೈಕ್ಲಿಂಗ್ ಮೆಶಿನ್ಗಳನ್ನು ಅಳವಡಿಸಿದೆ. ಈಗಾಗಲೇ ಇದು ಕಾಚಿಗುಡ, ಸಿಕಂದರಾಬಾದ್ ಮತ್ತು ನಿಜಾಮಾಬಾದ್ ಸ್ಟೇಶನ್ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ರೆಫ್ರಿಜರೇಟರ್ ಗಾತ್ರದಲ್ಲಿರುವ ಈ ಮಶಿನ್ಗಳು ದಿನಕ್ಕೆ 5000 ದಷ್ಟು ಬಾಟಲ್ಗಳನ್ನು ಕ್ರಶ್ ಮಾಡುವ ಸಾಮರ್ಥ್ಯ ಹೊಂದಿವೆ. ಕ್ರಶ್ ಆದ ಬಾಟಲ್ ತುಣುಕುಗಳ ರೀತಿಯಲ್ಲಿ ಹೊರಬರುತ್ತದೆ. ಈ ತುಣುಕುಗಳನ್ನು ಬ್ಯಾಗ್, ಟಿಶರ್ಟ್ ತಯಾರಿಕೆಗೆ ಬಳಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.