ಲಕ್ನೋ: ಉತ್ತರಪ್ರದೇಶದ ಸಂತ ಕಬೀರ ನಗರ ಜಿಲ್ಲೆಯ ಮಘರ್ನಲ್ಲಿನ 15ನೇ ಶತಮಾನದ ಮಹಾನ್ ಸಂತ ಕಬೀರರ ಸಮಾದಿ ಮತ್ತು ಮಝಾರ್ಗೆ ಗುರುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಚಾದರ್ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಸಿಎಂ ಯೋಗಿ ಆದಿತ್ಯನಾಥ ಅವರ ಜೊತೆಯಿದ್ದರು.
ಮಘರ್ಗೆ ಭೇಟಿ ಕೊಡುತ್ತಿರುವ ಮೊದಲ ಪ್ರಧಾನಿಯಾಗಿರುವ ಮೋದಿಗೆ, ಅಂಗವಸ್ತ್ರ ಮತ್ತು ಕಬೀರರ ಕೆಲವು ಸಾಹಿತ್ಯವನ್ನು ನೀಡಿ ಗೌರವಿಸಲಾಯಿತು.
ತುಸು ಕಾಲ ಸಮಾಧಿ ಸ್ಥಳದಲ್ಲಿದ್ದ ಮೋದಿ, ಸಿಬ್ಬಂದಿಗಳಿಂದ ಹಲವಾರು ವಿಷಯಗಳ ಬಗ್ಗೆ ಕೇಳಿ ತಿಳಿದುಕೊಂಡರು ಎನ್ನಲಾಗಿದೆ.
ಸಂತ ಕಬೀರರು ಮುಸ್ಲಿಂ ಮತ್ತು ಹಿಂದೂ ಸಮುದಾಯದವರಿಗೆ ಪೂಜನೀಯರಾಗಿದ್ದಾರೆ. ಭಾವೈಕ್ಯತೆಯ ಸ್ವರೂಪವಾಗಿರುವ ಅವರ ದೋಹಗಳು ಸಾಷಕ್ಟು ಪ್ರಸಿದ್ಧಿ ಪಡೆದುಕೊಂಡಿವೆ.
1518ರಲ್ಲಿ ಸಂತ ಕಬೀರರು ಅಸ್ತಂಗತರಾಗಿದ್ದು, ಇಂದು ಅವರ 500ನೇ ಪುಣ್ಯತಿಥಿಯಾಗಿದೆ.
ಭಾರತದ ಮೂಲತತ್ವದ ಪ್ರತಿಬಿಂಬವಾದ ಕಬೀರರು, ಜಾತಿ ಮತ್ತು ಮತಗಳ ಗೋಡೆಯನ್ನು ಒಡೆದು ಹಾಕಿ ಸಾಮಾನ್ಯರ, ಗ್ರಾಮೀಣರ ಭಾಷೆಯಲ್ಲಿ ಮಾತನಾಡಿದರು ಎಂದು ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.