ನವದೆಹಲಿ: ಭಯೋತ್ಪಾದಕರು ತಾವು ಮಾನವೀಯತೆಯನ್ನು ಮರೆತ ರಾಕ್ಷಸರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ದುಷ್ಟ ಕಾರ್ಯಗಳಿಗೆ ಎಳೆಯ ಮಕ್ಕಳನ್ನು ಬಳಸಿಕೊಂಡು ಅವರ ಸುಂದರ ಭವಿಷ್ಯವನ್ನು ನರಕಕ್ಕೆ ದೂಡುತ್ತಿದ್ದಾರೆ. ಕಾಶ್ಮೀರದಲ್ಲಿ ಗಲಭೆಯೆಬ್ಬಿಸುವ ಸಂದರ್ಭಗಳಲ್ಲಿ ಉಗ್ರರು ಮಕ್ಕಳನ್ನು ಗುಪ್ತಚರರನ್ನಾಗಿ ಬಳಕೆ ಮಾಡುತ್ತಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.
ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ನಂತ ಪಾಕಿಸ್ಥಾನದ ನಿಷೇಧಿತ ಭಯೋತ್ಪಾದನ ಸಂಘಟನೆಗಳು, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತ್ಯೇಕತಾವಾದಿಗಳ ನಡುವೆ ಕಳೆದ ವರ್ಷ ಗಲಭೆ ನಡೆದ ಸಂದರ್ಭ ಮಕ್ಕಳನ್ನು ಗುಪ್ತಚರರಾಗಿ ಬಳಸಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ ಗಲಭೆ ನಡೆದ ಸಂದರ್ಭ ಎರಡು ಉಗ್ರ ಸಂಘಟನೆಗಳು ಮಕ್ಕಳನ್ನು ಬಳಸಿಕೊಂಡ ಕನಿಷ್ಠ ಮೂರು ಘಟನೆಗಳು ನಡೆದಿವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಅಲ್ಲದೇ ಮಕ್ಕಳನ್ನು ಮಾಹಿತಿದಾರರಾಗಿ ಮತ್ತು ಗುಪ್ತಚರರಾಗಿ ಉಗ್ರರು ಬಳಸಿಕೊಳ್ಳುತ್ತಿರುವುದಕ್ಕೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.