ನರ್ಗೋಟ: ತಿಳಿಯದೆ ಭಾರತದ ಗಡಿಯನ್ನು ದಾಟಿ ಒಳಗೆ ಪ್ರವೇಶಿಸಿದ 11 ವರ್ಷದ ಪಾಕಿಸ್ಥಾನಿ ಬಾಲಕನನ್ನು ಸಿಹಿ ತಿನಿಸು ಹಾಗೂ ಹೊಸ ಬಟ್ಟೆಯೊಂದಿಗೆ ಆತನ ದೇಶಕ್ಕೆ ಮರಳಿ ಕಳುಹಿಸಿಕೊಡಲಾಗಿದೆ.
ಜೂನ್ 24ರಂದು ಜಮ್ಮ ಕಾಶ್ಮೀರದ ಪೂಂಚ್ ಜಿಲ್ಲೆಯ ನರ್ಗೋಟ ಭಾಗದಲ್ಲಿ ಪಾಕಿಸ್ಥಾನದ ಮೊಹಮ್ಮದ್ ಅಬ್ದುಲ್ಲಾ ಎಂಬ ಬಾಲಕ ಭಾರತ ಸೈನಿಕರ ಕಣ್ಣಿಗೆ ಬಿದ್ದಿದ್ದ. ಆತನನ್ನು ವಿಚಾರಿಸಿದಾಗ ಗಡಿ ದಾಟಿ ತಿಳಿಯದೆ ಭಾರತದೊಳಗೆ ಪ್ರವೇಶಿಸಿದ್ದಾನೆ ಎಂದು ತಿಳಿದು ಬಂದಿದೆ.
ತಕ್ಷಣವೇ ಪೊಲೀಸರು ಈತನ ಪೂರ್ವಾಪರಗಳನ್ನು ತಿಳಿದುಕೊಂಡು, ಈತನನ್ನು ಈತನ ದೇಶಕ್ಕೆ ಬಿಡುವ ಏರ್ಪಾಟು ಮಾಡಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ ಬುಧವಾರ ಸಿಹಿ ತಿಂಡಿ ಹಾಗೂ ಹೊಸ ಬಟ್ಟೆಯೊಂದಿಗೆ ಈತನನ್ನು ಈತನ ದೇಶಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಪಾಕಿಸ್ಥಾನ ಎಷ್ಟೇ ಕುತಂತ್ರಗಳನ್ನು ಮಾಡಿದರೂ ಭಾರತ ಮಾತ್ರ ತನ್ನ ಮಾನವೀಯ ಗುಣವನ್ನು ಮರೆತಿಲ್ಲ. ಶತ್ರು ರಾಷ್ಟ್ರದ ಪ್ರಜೆಗಳನ್ನೂ ಅದು ಅತಿಥಿಯಾಗಿ ನೋಡಿ ಸತ್ಕರಿಸುತ್ತದೆ, ಗೌರವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.