ನವದೆಹಲಿ: ಭಾರತದಲ್ಲಿ ಕಡು ಬಡತನದ ಸ್ಥಿತಿ ಇಳಿಕೆಯಾಗುತ್ತಿದೆ. ಈಗಾಗಲೇ ಶೇ.44ರಷ್ಟು ಭಾರತೀಯರು ಕಡು ಬಡತನದಿಂದ ಹೊರಕ್ಕೆ ಬಂದಿದ್ದಾರೆ. ಇದರಿಂದಾಗಿ ಅತೀದೊಡ್ಡ ಸಂಖ್ಯೆಯ ಬಡವರ ತವರು ಎಂಬ ಹಣೆಪಟ್ಟಿಯಿಂದ ಹೊರಬರಲಿದೆ ಎಂದು ಬ್ರೂಕಿಂಗ್ ಬ್ಲಾಗ್ನಲ್ಲಿ ಪ್ರಕಟಿಸಲಾದ ‘ಫ್ಯುಚರ್ ಡೆವಲಪ್ಮೆಂಟ್’ ಅಧ್ಯಯನದಲ್ಲಿ ತಿಳಿಸಲಾಗಿದೆ.
2022ರ ವೇಳೆಗೆ ಭಾರತದಲ್ಲಿ ಕಡು ಬಡವರ ಪ್ರಮಾಣ ಶೇ.3ಕ್ಕೆ ಇಳಿಕೆಯಾಗಲಿದೆ. 2030ಕ್ಕೆ ಬಡತನ ಕಣ್ಮರೆಯಾಗಲಿದೆ ಎಂದು ವರದಿ ಹೇಳಿದೆ.
ನೈಜೀರಿಯಾ ಅತೀದೊಡ್ಡ ಬಡವರ ದೇಶವಾಗಿ ಹೊರಹೊಮ್ಮಲಿದೆ, ನಂ.2 ಸ್ಥಾನದಲ್ಲಿ ಕಾಂಗೋ ಇರಲಿದೆ. ಮೂರನೇ ಸ್ಥಾನಕ್ಕೆ ಭಾರತ ಇಳಿಯಲಿದೆ ಎಂದಿದೆ.
ನೈಜೀರಿಯಾ 87 ಮಿಲಿಯನ್ ಕಡು ಬಡವರ ತವರಾಗುತ್ತಿದೆ. ಭಾರತದಲ್ಲಿ ಇವರ ಸಂಖ್ಯೆ 73 ಮಿಲಿಯನ್ ಇದೆ. ನೈಜೀರಿಯಾದಲ್ಲಿ ಆರು ಮಂದಿ ಬಡವರ ಸಂಖ್ಯೆ ಏರಿಕೆಯಾಗುತ್ತಿದೆ. ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದಿದೆ.
ಈ ಅಧ್ಯಯನದಲ್ಲಿ ದಿನಕ್ಕೆ ಡಾಲರ್ 1.9 ಕಡಿಮೆ ಆದಾಯದಲ್ಲಿ ಬದುಕುವವರನ್ನು ಕಡು ಬಡವರು ಎಂದು ಪರಿಣಗಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.