ನವದೆಹಲಿ: ಜಪಾನ್ ಭಾರತದ ಹೊಸ ಬೆಳಕಿನತ್ತ ದೃಷ್ಟಿ ಹರಿಸಿದ್ದು, ಭಾರತ ಜಪಾನಿ ಹೂಡಿಕೆಯ ಪರ್ಯಾಯ ತಾಣವಾಗಿ ಚೀನಾವನ್ನು ರಿಪ್ಲೇಸ್ ಮಾಡುವ ಸಮಯ ಹತ್ತಿರವಿದೆ ಎಂದು ಜಪಾನಿನ ಭಾರತ ರಾಯಭಾರಿ ಸುಜನ್ ಚಿನೋಯ್ ಹೇಳಿದ್ದಾರೆ.
ಅಹ್ಮದಾಬಾದ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ನನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ನೀಡುತ್ತಿರುವ ಮಹತ್ವದ ಆಫರ್ಗಳತ್ತ ಜಪಾನ್ ಉತ್ಸುಹುಕವಾಗಿದೆ. ತಮ್ಮ ಹೂಡಿಕೆಗಳಿಗಾಗಿ ಜಪಾನಿಯರು ಭಾರತವನ್ನು ಅತ್ಯಂತ ಪ್ರಮುಖ ಮತ್ತು ನೆಚ್ಚಿನ ತಾಣವಾಗಿ ನೊಡುತ್ತಿದ್ದಾರೆ. ಚೀನಾದ ಆರ್ಥಿಕತೆ ಮೇಲಿನ ಅವರ ಸುದೀರ್ಘ ಅವಧಿಯ ಹೂಡಿಕೆಗೆ ಮುಂಬರುವ ದಿನಗಳಲ್ಲಿ ಭಾರತ ಪರ್ಯಾಯವಾಗಲಿದೆ ಎಂದಿದ್ದಾರೆ.
ಭಾರತದಲ್ಲಿನ ಜಪಾನಿ ಪ್ರಸ್ತುತತೆಯ ರೀತಿ ಬದಲಾಗಿದೆ, ಈಗ ಅವರು ಭಾರತವನ್ನು ಹೊಸ ಬೆಳಕಿನಂತೆ ನೋಡುತ್ತಿದ್ದಾರೆ. ಕೇವಲ ಉತ್ಪಾದನ ವಲಯದಲ್ಲಿ ಮಾತ್ರವಲ್ಲ, ಹಣಕಾಸು ಸೇವೆ, ಲಾಜಿಸ್ಟಿಕ್ಸ್, ಕೌಶಲ್ಯಾಭಿವೃದ್ಧಿಯಂತಹ ವಿವಿಧ ವಲಯಗಳತ್ತ ಅವರು ಆಕರ್ಷಿತರಾಗುತ್ತಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.