ನವದೆಹಲಿ: ಇನ್ನು ಮುಂದೆ ಭಾರತದ ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ಮೊಬೈಲ್ ಮೂಲಕ ಪಾಸ್ಪೋರ್ಟ್ಗೆ ಅರ್ಜಿ ಹಾಕಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ವೊಂದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅನಾವರಣಗೊಳಿಸಿದ್ದಾರೆ.
ಆರನೇ ಪಾಸ್ಪೋರ್ಟ್ ಸೇವಾ ದಿವಸ್ನ ಅಂಗವಾಗಿ, ‘ಪಾಸ್ಪೋರ್ಟ್ ಸೇವಾ ಆ್ಯಪ್’ಗೆ ಸುಷ್ಮಾ ಚಾಲನೆ ನೀಡಿದ್ದು, ಈ ಆ್ಯಪ್ ನ್ನು ಬಳಸಿ ಜನರು ತಮ್ಮ ಮೊಬೈಲ್ ಮೂಲಕ ಪಾಸ್ಪೋರ್ಟ್ಗೆ ಅರ್ಜಿ ಹಾಕಬಹುದಾಗಿದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ಗಳೆರಡರಲ್ಲೂ ಈ ಆ್ಯಪ್ ಲಭ್ಯವಾಗುತ್ತದೆ. ಇದರಲ್ಲಿ ಅರ್ಜಿ ಹಾಕುವ, ಹಣ ಪಾವತಿಸುವ ಮತ್ತು ಅಪಾಯಿಂಟ್ಮೆಂಟ್ಗಳನ್ನು ಕಾಯ್ದಿರಿಸುವ ಸೌಲಭ್ಯಗಳಿವೆ.
ಪ್ರಸ್ತುತ ದೇಶದಲ್ಲಿ 307 ಪಾಸ್ಪೋರ್ಟ್ ಕೇಂದ್ರಗಳಿವೆ. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಮಾರು 231 ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಸುಷ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.