ನವದೆಹಲಿ: ‘ವಂದೇ ಮಾತರಂ’ ಹಾಡಿನ ಮೂಲಕ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸಿದ್ದ ಕವಿ ಬಂಕಿಮ್ ಚಂದ್ರ ಚಟರ್ಜಿಯವರ ಜನ್ಮದಿನವಿಂದು. ಬರಹಗಾರನಾಗಿ, ಕವಿಯಾಗಿ, ಪತ್ರಕರ್ತನಾಗಿ, ಉಪನ್ಯಾಸಕನಾಗಿ ಸ್ವಾತಂತ್ರ್ಯ ಚಳುವಳಿಗೆ ಇವರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
ಬಂಗಾಳದ ನೈಹಟಿಯಲ್ಲಿ 1838ರ ಜೂನ್ 27ರಂದು ಜನಿಸಿದ ಇವರು, 13 ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ರಚಿಸಿದ ‘ವಂದೇ ಮಾತರಂ’ ಸಂಸ್ಕೃತ ಹಾಡು ಇಂದಿಗೂ ಭಾರತೀಯರ ನೆಚ್ಚಿನ ರಾಷ್ಟ್ರೀಯ ಹಾಡಾಗಿ ರಾರಾಜಿಸುತ್ತಿದೆ. ಭಾರತವನ್ನು ತಾಯಿಗೆ ಹೋಲಿಸಿ ಬರೆಯಲಾದ ಅತ್ಯದ್ಭುತ ಗೀತೆ ಇದಾಗಿದೆ.
ದುರ್ಗೇಶ್ನಂದಿನಿ, ಕಪಲ್ಕುಂಡಲ, ದೇವಿ ಚೌಧುರಾಣಿ, ಆನಂದಮಠ್ ಇವರು ರಚಿಸಿದ ಇತರ ಸುಪ್ರಸಿದ್ಧ ಸಾಹಿತ್ಯಗಳಾಗಿವೆ.
1894ರ ತಮ್ಮ 55ನೇ ವಯಸ್ಸಿನಲ್ಲಿ ಇವರು ಕೋಲ್ಕತ್ತಾದಲ್ಲಿ ಇಹಲೋಕ ತ್ಯಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.